ಉಡುಪಿ:ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಜ.11ರಂದು ಶ್ರೀ ಪಂಚದುರ್ಗ ನಮಸ್ಕಾರ ಪೂಜೆ

ಉಡುಪಿ:ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಇದೇ ತಿಂಗಳ ತಾರೀಕು ಹನ್ನೊಂದರ ಶನಿವಾರದಂದು ಶ್ರೀ ಪಂಚದುರ್ಗ ನಮಸ್ಕಾರ ಪೂಜೆ ಸಂಪನ್ನಗೊಳ್ಳಲಿದೆ.. ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಸಂಜೆ ಗಂಟೆ 5 ರಿಂದ ಪೂಜೆ ಆರಂಭಗೊಳ್ಳಲಿದೆ.. ಏಕಕಾಲದಲ್ಲಿ ಪಂಚವರ್ಣಾತ್ಮಕವಾಗಿ ರಚಿಸಲಾಗುವ 5 ಮಂಡಲಗಳಲ್ಲಿ ಮೂಲದುರ್ಗ ಜಲದುರ್ಗ ಅಗ್ನಿದುರ್ಗ ವನದುರ್ಗ ಹಾಗೂ ಅಗ್ರ ದುರ್ಗೆ ಎಂದು ಪಂಚ ದೀಪದಲ್ಲಿಪಂಚ ದುರ್ಗೆಯರನ್ನು ಪಂಚ ರೂಪದಿಂದ ಪೂಜಿಸಲಾಗುತ್ತದೆ.. […]