ರಾ.ಹೆ. ಸೂಚನಾಫಲಕಕ್ಕೆ ತರಕಾರಿ ವಾಹನ ಡಿಕ್ಕಿ: ಇಬ್ಬರ ಸಾವು

ಉಡುಪಿ: ಅಂಬಾಗಿಲು ಬಳಿ ರಾಷ್ಟ್ರೀಯ ಹೆದ್ದಾರಿ 66ರ ಬಳಿಯ ಸೂಚನ ಫಲಕದ ಕಂಬಕ್ಕೆ ಮಹೇಂದ್ರ ಪಿಕ್ ಅಪ್ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಚಾಲಕ ಸಹಿತ ಇಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ. ಕುಂದಾಪುರ ಮೂರುಕೈ ನಿವಾಸಿ, ಚಾಲಕ ದಿನೇಶ್ (37) ಹಾಗೂ ಇವರ ನೆರೆಮನೆಯ ಮಂಜುನಾಥ್(26) ಮೃತ ದುರ್ದೈವಿಗಳು. ಇವರು ಆದಿಉಡುಪಿ ಎಪಿಎಂಸಿ ಮಾರುಕಟ್ಟೆಗೆ ತರಕಾರಿ ಖರೀದಿಸಲು ಬರುತ್ತಿದ್ದರು ಎನ್ನಲಾಗಿದೆ. ಈ ವೇಳೆ ನಿದ್ದೆ ಮಂಪರಿನಿಂದ ಚಾಲಕನ ನಿಯಂತ್ರಣ ತಪ್ಪಿದ ವಾಹನ ರಸ್ತೆ ಬದಿ […]