ಅಪಘಾತಗಳಿಗೆ ಆಹ್ವಾನ ನೀಡುತ್ತಿರುವ ಪಳ್ಳಿ-ಮೂಡುಬೆಳ್ಳೆ ರಸ್ತೆಯ ಗುಂಡಿಗಳನ್ನು ಇನ್ನಾದರೂ ಮುಚ್ಚಿಸಿ: ವಿಷ್ಣುಪ್ರಸಾದ್ ಕೊಡಿಬೆಟ್ಟು ಆಗ್ರಹ

ಉಡುಪಿ: ಕಾರ್ಕಳದ ಪಳ್ಳಿ-ಮೂಡುಬೆಳ್ಳೆ ರಸ್ತೆಯಲ್ಲಿ ಗುಂಡಿಗಳು ಅಪಫಾತಗಳೀಗೆ ಆಹ್ವಾನ ನೀಡುತ್ತಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ತೊಡಕಾಗಿದ್ದು ಜೀವಭಯದಿಂದ ಸಂಚರಿಸಬೇಕಾದ ಸ್ಥಿತಿ ಇದೆ. ಕೂಡಲೇ ಈ ರಸ್ತೆಯನ್ನು ದುರಸ್ತಿಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ವಿಷ್ಣುಪ್ರಸಾದ್ ಕೊಡಿಬೆಟ್ಟು ಮನವಿ ಮಾಡಿದ್ದಾರೆ. “ಇತ್ತೀಚಿಗಷ್ಟೇ ರಸ್ತೆಗೆ ತೇಪೆ ಹಾಕಲಾಗಿದ್ದು ಕಳೆದ ಮಳೆಗಾಲದ ನಂತರ ರಸ್ತೆ ಮತ್ತೆ ಬಿರುಕು ಬಿಟ್ಟಿದೆ. ಹೊಂಡಗಳನ್ನು ತಪ್ಪಿಸುವ ಪ್ರಯತ್ನದಲ್ಲಿ ಹಲವು ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ವಾಹನಗಳು ತಾಂತ್ರಿಕ ಸಮಸ್ಯೆ ಎದುರಿಸುತ್ತಿದೆ. ಮುಂದಿನ […]