ಜೂ. 1: ಉಡುಪಿಯಲ್ಲಿ ಸಂಚಾರ ಬದಲಾವಣೆ

ಉಡುಪಿ, ಮೇ 30: ಶ್ರೀಕೃಷ್ಣ ಮಠದಲ್ಲಿ ಸುವರ್ಣ ಗೋಪುರ ಸಮರ್ಪಣೋತ್ಸವ ಪ್ರಯುಕ್ತ ಜೂ.1ರಂದು ಜೋಡುಕಟ್ಟೆಯಿಂದ ಶ್ರೀಕೃಷ್ಣ ಮಠದವರೆಗೆ ಶೋಭಾಯಾತ್ರೆ ನಡೆಯಲಿರುವುದರಿಂದ ಅಂದು ಉಡುಪಿ ನಗರದಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ಅಂದು ಸಂಜೆ 4ರಿಂದ ರಾತ್ರಿ ಸುಮಾರು 9 ಗಂಟೆಯವರೆಗೆ ಸಂಚಾರ ಬದಲಾವಣೆ ಇರುತ್ತದೆ ಎಂದು ಎಸ್‌ಪಿ ನಿಶಾ ಜೇಮ್ಸ್‌ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ••ಶೋಭಾಯಾತ್ರೆ ಜೋಡುಕಟ್ಟೆಯಿಂದ ಹೊರಡುವ ವೇಳೆ ಸರ್ವಿಸ್‌ ಮತ್ತು ಸಿಟಿ ಬಸ್‌ ನಿಲ್ದಾಣದಿಂದ ಮಂಗಳೂರು, ಕಟಪಾಡಿ, ಅಂಬಲಪಾಡಿ ಕಡೆಗೆ ಹೋಗುವ ಎಲ್ಲ ಬಸ್ಸುಗಳು ಶಿರಿಬೀಡು, […]