ಕುದಿ ಗ್ರಾಮದ ಗ್ಯಾಸ್ ಪ್ಲಾಂಟ್ ನಲ್ಲಿ ಅನಿಲ ಸೋರಿಕೆ, ತಕ್ಷಣ ಕಾರ್ಯಾಚರಣೆ, ತಪ್ಪಿದ ಭಾರೀ ಅನಾಹುತ: ಇದು ರಾಸಾಯನಿಕ ವಿಪತ್ತು ನಿರ್ವಹಣಾ ಅಣಕು ಪ್ರದರ್ಶನ

ಉಡುಪಿ: ಉಡುಪಿ ತಾಲೂಕಿನ ಕುದಿ ಗ್ರಾಮದ ಜನತೆಗೆ ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ತೀವ್ರ ಉಸಿರಾಟದ ತೊಂದರೆ ಹಾಗೂ ಅಸ್ವಸ್ಥತೆ ಕಾಣಿಸಿಕೊಂಡಿದ್ದರಿಂದ ಸಾರ್ವಜನಿಕರು ತೀವ್ರ ಆತಂಕದಲ್ಲಿದ್ದರು, ಗ್ರಾಮದಲ್ಲಿದ್ದ ಎ.ಜಿ.ಎಸ್. ಎಲ್‌ಪಿಜಿ ಇಂಡಸ್ಟ್ರಿಯಲ್ಲಿ ಸಂಭವಿಸಿದ ಅನಿಲ ಸೋರಿಕೆಯಿಂದಾಗಿ ಈ ಘಟನೆ ಸಂಭವಿಸಿತ್ತು. ಇಂದು ಬೆಳಗ್ಗೆ 8.50 ಕ್ಕೆ ಕುದಿ ಗ್ರಾಮದಲ್ಲಿರುವ ಎ.ಜಿ.ಎಸ್ ಎಲ್‌ಪಿಜಿ ಇಂಡಸ್ಟ್ರಿಯಲ್ಲಿ ಅನಿಲ ಸೋರಿಕೆ ಕಂಡು ಬಂದಿದ್ದು, ತಕ್ಷಣವೇ ಅಲ್ಲಿನ ಸಿಬ್ಬಂದಿ ಉಡುಪಿ ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ಉಚಿತ ದೂರವಾಣಿ ಸಂಖ್ಯೆ 1077 ಗೆ ಘಟನೆ […]

ಉಡುಪಿ ಜಿಲ್ಲಾ ಭಾರತ ಸೇವಾ ದಳ ಸಂಸ್ಥೆ ಅಧ್ಯಕ್ಷ ಸ್ಥಾನ ಚುನಾವಣೆ: ಅಂಡಾರು ದೇವಿ ಪ್ರಸಾದ್ ಶೆಟ್ಟಿ ಅವಿರೋಧ ಆಯ್ಕೆ

ಉಡುಪಿ: ಕರ್ನಾಟಕ ಸರಕಾರದ ಅಂಗ ಸಂಸ್ಥೆಯಾದ ಉಡುಪಿ ಜಿಲ್ಲಾ ಭಾರತ ಸೇವಾ ದಳ ಸಂಸ್ಥೆಗೆ 2022-27 ರ ಸಾಲಿಗೆ ಪದಾಧಿಕಾರಿಗಳ ಚುನಾವಣೆ ನಡೆದು ಅಧ್ಯಕ್ಷರಾಗಿ ಉಡುಪಿ ಜಿಲ್ಲಾ ಕೈಗಾರಿಕೋದ್ಯಮ ಮತ್ತು ವಾಣಿಜ್ಯ ಸಂಸ್ಥೆಯ ಅಧ್ಯಕ್ಷ ಅಂಡಾರು ದೇವಿ ಪ್ರಸಾದ್ ಶೆಟ್ಟಿ ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ. ಹಾಗೂ ಉಪಾಧ್ಯಕ್ಷರಾಗಿ ಉಡುಪಿ ನಗರಸಭಾ ಸದಸ್ಯ ಗಿರೀಶ್ ಎಂ ಅಂಚನ್ ಹಾಗೂ ರಾಜ್ಯ ಕಾರ್ಯಕಾರಿ ಸದಸ್ಯರಾಗಿ ಆರೂರು ತಿಮ್ಮಪ್ಪ ಶೆಟ್ಟಿ ಆಯ್ಕೆಗೊಂಡಿದ್ದು, ಕಾರ್ಯದರ್ಶಿಯಾಗಿ ಮುಖ್ಯ ಶಿಕ್ಷಕ ಸಂಜೀವ ದೇವಾಡಿಗ ಕಾರ್ಕಳ, ಹಾಗೂ ಖಜಾಂಚಿಯಾಗಿ […]

ಪ್ರವೀಣ್ ನೆಟ್ಟಾರ್ ಹತ್ಯೆ ಅಮಾನವೀಯ: ಕಾಪು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಚರಣ್ ವಿಠಲ್

ಉಡುಪಿ: ಯುವವಾಹಿನಿ ಕೇಂದ್ರ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯ, ಸಂಘಟನಾ ಕಾರ್ಯದರ್ಶಿ ಹಾಗೂ ಹಿಂದೂ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಕೊಲೆ ಅಮಾನವೀಯ ಹಾಗೂ ಖಂಡನೀಯ ಎಂದು ಕಾಪು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ (ಉತ್ತರ) ಅಧ್ಯಕ್ಷ ಚರಣ್ ವಿಠ್ಠಲ್ ಹೇಳಿದ್ದಾರೆ. ರಾಜ್ಯದಲ್ಲಿ ಹಿಂದೂ ಮತ್ತು ಮುಸ್ಲಿಂ ಯುವಕರ ಹತ್ಯೆ ನೆಡೆಯುತ್ತಲೇ ಇದೆ, ಇದರ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರ ಕಠಿಣ ಕ್ರಮವನ್ನು ಕೈಗೊಂಡು ರಾಜ್ಯದ ಪ್ರತಿಯೊಬ್ಬ ಜನತೆಗೆ ರಕ್ಷಣೆ ನೀಡಬೇಕು. ಕೊಲೆ ಮಾಡಿದಂತಹ ದುಷ್ಕರ್ಮಿಗಳನ್ನು […]

ಜುಲೈ 29 ರಂದು ಉಡುಪಿ ತಾ.ಪಂ ಸಾಮಾನ್ಯ ಸಭೆ

ಉಡುಪಿ: ಉಡುಪಿ ತಾಲೂಕು ಪಂಚಾಯತ್‌ನ ಸಾಮಾನ್ಯ ಸಭೆಯು ಜುಲೈ 29 ರಂದು ಬೆಳಗ್ಗೆ 11.30 ಕ್ಕೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ, ಆಡಳಿತ ಅಧಿಕಾರಿ ಬಾಬು ಎಮ್ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.