ನಗರ ಕೇಂದ್ರ ಗ್ರಂಥಾಲಯದಲ್ಲಿ 28ನೇ ಆಯವ್ಯಯ ಸಭೆ

ಉಡುಪಿ: ನಗರ ಕೇಂದ್ರ ಗ್ರಂಥಾಲಯದಲ್ಲಿ ನಗರ ಗ್ರಂಥಾಲಯ ಪ್ರಾಧಿಕಾರದ 28ನೇ ಆಯವ್ಯಯ ಸಭೆಯು ನಗರಸಭೆ ಅಧ್ಯಕ್ಷೆ ಮತ್ತು ನಗರ ಗ್ರಂಥಾಲಯ ಪ್ರಾಧಿಕಾರದ ಪದನಿಮಿತ್ತ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ನಗರ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷೆ ಹಾಗೂ ಡಾ ಜಿ.ಶಂಕರ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಭಾಸ್ಕರ ಶೆಟ್ಟಿ, ನಗರಸಭೆ ಸದಸ್ಯರಾದ ಯೋಗೀಶ್ ಸಾಲ್ಯಾನ್ ಮತ್ತು ರಶ್ಮಿ ಚಿತ್ತರಂಜನ್ ಭಟ್, ಸಾಹಿತಿ ಡಾ ನಿಕೇತನ ಹಾಗೂ ನ್ನಿತರ ಸದಸ್ಯರು ಉಪಸ್ಥಿತರಿದ್ದರು. ಯು.ಪಿ.ಎಸ್.ಸಿ ಮತ್ತು […]
ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಜಿಲ್ಲೆಗೆ 1 ಕೋಟಿ 15 ಲಕ್ಷಕ್ಕೂ ಅಧಿಕ ಮೊತ್ತ ಮಂಜೂರು

ಉಡುಪಿ: ಜನವರಿ 2020 ರಿಂದ ಡಿಸೆಂಬರ್ 2022 ರ ತನಕ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ(PMNRF) ಯಿಂದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಡುಪಿ ಜಿಲ್ಲೆಗೆ ಮಾನ್ಯ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರ ಶಿಫಾರಸ್ಸಿನ ಮೇರೆಗೆ ಸುಮಾರು ರೂಪಾಯಿ 1,15,60,000(ಒಂದು ಕೋಟಿ ಹದಿನೈದು ಲಕ್ಷದ ಅರ್ವತ್ತು ಸಾವಿರ ರೂಪಾಯಿ)ಮೊತ್ತವನ್ನು ರೋಗಿಗಳ ಚಿಕಿತ್ಸೆಗೆ ಮಂಜೂರು ಮಾಡಲಾಗಿದೆ ಎಂದು ಸಂಸದರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ದ.ಕ ಜಿಲ್ಲೆಯಲ್ಲಿ 2,86,576 ಲೀ; ಉಡುಪಿಯಲ್ಲಿ 1,89,806 ಲೀ. ಹಾಲು ಸಂಗ್ರಹಣೆ

ಉಡುಪಿ: ದಕ್ಷಿಣ ಕನ್ನಡ ಹಾಲು ಒಕ್ಕೂಟದ ವ್ಯಾಪ್ತಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ 396 ಸಂಘಗಳ 35707 ಸದಸ್ಯರಿಂದ 2,86,576 ಲೀ. ಹಾಗೂ ಉಡುಪಿ ಜಿಲ್ಲೆಯಲ್ಲಿ 338 ಸಂಘಗಳ 29396 ಸದಸ್ಯರಿಂದ 1,89,806 ಲೀ. ಹಾಲು ಸಂಗ್ರಹಣೆಯಾಗುತ್ತಿದೆ. ಡಿಸೆಂಬರ್ 2021ರ ಮಾಹೆಯಲ್ಲಿ ದ.ಕ ಜಿಲ್ಲೆಯಲ್ಲಿ 392 ಸಂಘಗಳ 36943 ಸದಸ್ಯರಿಂದ 3,09,872 ಲೀ. ಹಾಗೂ ಉಡುಪಿ ಜಿಲ್ಲೆಯಲ್ಲಿ 338 ಸಂಘಗಳ 30553 ಸದಸ್ಯರಿಂದ ಒಟ್ಟು 2,09,532 ಲೀ. ಹಾಲು ಸಂಗ್ರಹಣೆಯಾಗುತ್ತಿದೆ. ಇದನ್ನು ಗಮನಿಸಿದಾಗ ದ.ಕ ಜಿಲ್ಲೆಯಲ್ಲಿ 1236 […]
ಜ.22 ರಂದು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರಜಾಧ್ವನಿ ಯಾತ್ರೆ ಬೃಹತ್ ಸಮಾವೇಶ

ಉಡುಪಿ: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಜ.22 ರಂದು ಬೆಳಿಗ್ಗೆ 10 ಗಂಟೆಗೆ ಪ್ರಜಾಧ್ವನಿ ಯಾತ್ರೆ ಬೃಹತ್ ಸಮಾವೇಶವನ್ನು ಉಡುಪಿಯ ಕ್ರಿಶ್ಚಿಯನ್ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯಗಳು, ಮಿತಿಮೀರಿದ ಭ್ರಷ್ಟಾಚಾರ, ಪೊಲೀಸ್ ನೇಮಕಾತಿಯಲ್ಲಿ ಲಂಚದ ಬೇಡಿಕೆ, ಭೂ ಕಬಳಿಕೆ ಹಗರಣ, ಕೋವಿಡ್-19 ಮಹಾಮಾರಿ ಸಂದರ್ಭದಲ್ಲಿ ವೈದ್ಯಕೀಯ ಸಲಕರಣೆಗಳಲ್ಲಿ ಅವ್ಯವಹಾರ, ಆಹಾರ ಕಿಟ್‌ನಲ್ಲಿ ಭ್ರಷ್ಟಾಚಾರ, ಮಕ್ಕಳಿಗೆ ಅಂಗನವಾಡಿಯಲ್ಲಿ ನೀಡುತ್ತಿರುವ ಮೊಟ್ಟೆಯಲ್ಲೂ ಹಗರಣ, ಇಂಧನ ಇಲಾಖೆಯಲ್ಲಿ ಭ್ರಷ್ಟಾಚಾರ, ಅಕ್ರಮವಾಗಿ ಶಾಸಕರನ್ನು ಖರೀದಿಸಿ ಜನಬೆಂಬಲವಿಲ್ಲದೆ […]
ಉಡುಪಿ ರಜತಮಹೋತ್ಸವ: ಕಾಪು- ಮಲ್ಪೆ ಬೀಚ್ ನಲ್ಲಿ ಸಮಾರಂಭ

ಉಡುಪಿ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ರಜತ ಉಡುಪಿ- ಬೀಚ್ ಉತ್ಸವ ಕಾರ್ಯಕ್ರಮವು ಜನವರಿ 20 ರಿಂದ 22 ರ ವರೆಗೆ ಮಲ್ಪೆಯಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಉದ್ಘಾಟಿಸಲಿದ್ದು, ಶಾಸಕ ಕೆ ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಪು ತಾಲೂಕು ಆಡಳಿತ ಇವರ ವತಿಯಿಂದ ಉಡುಪಿ […]