ನಿರ್ಮಾಣ ಹಂತದ ಕಟ್ಟಡಗಳ ಎದುರು ಅನುಮೋದಿತ ನಕ್ಷೆ ಪ್ರದರ್ಶನ ಕಡ್ಡಾಯ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಮಾಡುವ ಮಾಲೀಕರು, ಕಟ್ಟಡದ ನಕ್ಷೆಗೆ ಅನುಮೋದನೆ ಪಡೆದು ಕಟ್ಟಡದ ಮುಂದೆ ಅನುಮೋದಿತ ನಕ್ಷೆಯನ್ನು ಪ್ರದರ್ಶನ ಮಾಡಬೇಕು. ಇದರಿಂದ ಕಟ್ಟಡದ ಸ್ವರೂಪ, ವಿಸ್ತೀರ್ಣ, ಕಟ್ಟಡದ ಮಾದರಿ, ಇತರೆ ವಿಷಯಗಳು ಸಾರ್ವಜನಿಕರ ಗಮನಕ್ಕೆ ಬಂದು ಸಾರ್ವಜನಿಕರಲ್ಲಿ ಉಂಟಾಗುವ ಅನುಮಾನ ನಿವಾರಣೆಯಾಗಲಿದೆ. ಆದ್ದರಿಂದ ಪ್ರತಿ ಕಟ್ಟಡದ ಮಾಲೀಕರು ಕಟ್ಟಡ ಪ್ರಾರಂಭಿಸುವ ಮೊದಲು ಮಂಜೂರಾದ ನಕ್ಷೆಯನ್ನು ಕಟ್ಟಡದ ಎದುರು ಪ್ರದರ್ಶನ ಮಾಡಿ ಕಟ್ಟಡ ರಚನೆ ಮಾಡಬೇಕು. ಯಾವುದೇ ಬದಲಾವಣೆ ಅಥವಾ ಪರಿಷ್ಕರಣೆ ಮಾಡುವುದಿದ್ದಲ್ಲಿ ಸಂಬಂಧಿಸಿದ […]