ರಾಹುಲ್ ಗಾಂಧಿಯವರ “ಸಾವರ್ಕರ್ ಅಲ್ಲ” ಹೇಳಿಕೆಗೆ ಉದ್ಧವ್ ಠಾಕ್ರೆಯಿಂದ ಎಚ್ಚರಿಕೆ

ಮುಂಬೈ: ಸಾವರ್ಕರ್’ಗೆ ಅವಮಾನ ಮಾಡಿದರೆ ಪ್ರತಿಪಕ್ಷಗಳ ಮೈತ್ರಿಯಲ್ಲಿ ಬಿರುಕು ಉಂಟಾಗಲಿದೆ ಎಂದು ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಎಚ್ಚರಿಕೆ ನೀಡಿದ್ದಾರೆ. ಹಿಂದುತ್ವ ಸಿದ್ಧಾಂತವಾದಿ ಸಾವರ್ಕರ್ ಅವರನ್ನು ಮಾದರಿಯಾಗಿ ಪರಿಗಣಿಸುತ್ತೇವೆ. ಅವರನ್ನು ಅವಮಾನಿಸುವುದನ್ನು ಸಹಿಸುವುದಿಲ್ಲ ಎಂದರು.ಪ್ರಧಾನಿ ವಿರುದ್ಧದ ರಾಹುಲ್ ಗಾಂಧಿ ಟೀಕೆಗೆ ಬಿಜೆಪಿ ನಿಲುವನ್ನು ತೀವ್ರವಾಗಿ ಖಂಡಿಸಿರುವ ಅವರು ಮೋದಿ ಎಂದರೆ ಭಾರತವಲ್ಲ. ಮೋದಿಯನ್ನು ಪ್ರಶ್ನಿಸುವುದು ಭಾರತಕ್ಕೆ ಮಾಡುವ ಅಪಮಾನವಲ್ಲ ಎಂದಿದ್ದಾರೆ.