ರೋಟರಿ ಕ್ಲಬ್ ವತಿಯಿಂದ ಯು.ಎಸ್.ನಾಯಕ್ ಕನ್ನಡ ಮಾಧ್ಯಮ ಶಾಲೆಗೆ ಬಸ್ ಕೊಡುಗೆ

ಪಟ್ಲ: ಇಲ್ಲಿನ ರೂರಲ್ ಎಜುಕೇಶನ್ ಸೊಸೈಟಿಯೊಂದಿಗೆ ಯು.ಎಸ್.ನಾಯಕ್ ಪ್ರೌಢಶಾಲೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ, ರೋಟರಿ ವತಿಯಿಂದ ಬಸ್ಸು ಕೊಡುಗೆ ಮತ್ತು ದಿ. ಪಿ.ಆರ್. ನಾಯಕ್ ಸಂಸ್ಮರಣೆ ಕಾರ್ಯಕ್ರಮವು ಆದಿತ್ಯವಾರದಂದು ನಡೆಯಿತು. ರೋ. ಗಣೇಶ ನಾಯಕ್ ಬೆಲ್ಪತ್ರೆ ಇವರು ಸೊಸೈಟಿ ವತಿಯಿಂದ ಶಾಲಾ ಮಕ್ಕಳ ಪ್ರಯಾಣಕ್ಕೆ ನೀಡಲಾದ ಬಸ್ಸನ್ನು ಹಸ್ತಾಂತರಿಸಿದರು. ರೋ. ದಯಾನಂದ ಶೆಟ್ಟಿ ತಮ್ಮ ಸಂಸ್ಮರಣಾ ಭಾಷಣದಲ್ಲಿ ದಿ. ಪಿ.ರವೀಂದ್ರ ನಾಯಕ್ ರವರ ಮುಗ್ಧತೆ, ಅಜಾತಶತ್ರುತ್ವ, ದಾನಗುಣ, ಸತ್ಕಾರ್ಯಗಳಿಗೆ ಪ್ರೋತ್ಸಾಹ ನೀಡುವ ಸದ್ಗುಣಗಳನ್ನು ಪ್ರಶಂಸಿಸಿ ಸ್ಮರಿಸಿದರು. ಪತ್ರಕರ್ತ […]