ಬೀಜಾಡಿ:ಸಾಯುವ ಸ್ಥಿತಿಯಲ್ಲಿದ್ದ ಕಡಲಾಮೆಯನ್ನು ರಕ್ಷಿಸಿದರು !

ಕುಂದಾಪುರ : ಬೀಜಾಡಿ ಕಡಲ ಕಿನಾರೆಯಲ್ಲಿ ಗಂಭೀರ ಗಾಯಗೊಂಡು ಅರೆಜೀವವಾಗಿ ಬಿದ್ದಿದ್ದ ಕಡಲಾಮೆಯನ್ನು ಕ್ಲೀನ್ ಕುಂದಾಪುರ ಪ್ರೊಜೆಕ್ಟ್ ಸದಸ್ಯರು ರಕ್ಷಿಸಿ ಚಿಕಿತ್ಸೆ ನೀಡುತ್ತಿದ್ದಾರೆ.ಸಮುದ್ರ ತೀರಗಳ ಸ್ವಚ್ಛತಾ ಅಭಿಯಾನ ನಡೆಸುತ್ತಿರುವ ಕ್ಲೀನ್ ಪೊಜೆಕ್ಟ್ ಸದಸ್ಯರು ಬೀಜಾಡಿ ಬೀಜ್ ಬಳಿ ಸ್ವಚ್ಛತಾ ಕಾರ್ಯ ನಡೆಸುತ್ತಿರುವಾಗ ಗಾಯಗೊಂಡ ಆಮೆ ಕಣ್ಣಿಗೆ ಬಿದ್ದಿದೆಪ್ರೊಜೆಕ್ಟ್ ತಂಡದ ಸದಸ್ಯೆ ಡಾ.ರಶ್ಮಿ ಆಮೆಗೆ ಪ್ರಥಮ ಚಿಕಿತ್ಸೆ ನೀಡಿದ್ದು ಕೃತಕ ನೀರಿನ ತೊಟ್ಟಿ ನಿರ್ಮಿಸಿ ಆಮೆ ಅದರಲ್ಲಿ ಬಿಟ್ಟು ನಂಜು ನಾಶಕ ಔಷಧ ನೀಡಲಾಗಿದೆ. ಕುಂದಾಪುರ ಪಶು ವೈದ್ಯಾಧಿಕಾರಿ […]