ಶೀಘ್ರದಲ್ಲೇ ಕೊನೆಗೊಳ್ಳಲಿದೆ ಕೋವಿಡ್ ಜಾಗೃತಿ ಕಾಲರ್ ಟ್ಯೂನ್
ನವದೆಹಲಿ: ಕೋವಿಡ್ ಕಾಲರ್ ಟ್ಯೂನ್ ಕೇಳಿ ಬೇಸತ್ತಿದ್ದು, ಜನರಿಗೆ ಇನ್ನೂ ಗುಡ್ ನ್ಯೂಸ್ ಸಿಗಲಿದೆ. ಕೋವಿಡ್ ಕಾಲರ್ ಟ್ಯೂನ್‌ಗಳು ಇನ್ನು ಮುಂದೆ ಕೇಳಿಸುವುದಿಲ್ಲ. ಶೀಘ್ರದಲ್ಲೇ ಕಾಲರ್ ಟ್ಯೂನ್ ಗೆ ಅಂತ್ಯ ಹಾಡಲಾಗುತ್ತದೆ. ಕೋವಿಡ್- 19 ಕುರಿತು ಜಾಗೃತಿಗಾಗಿ ಟೆಲಿಕಾಂ ಆಪರೇಟರ್‌ಗಳು ಪರಿಚಯಿಸಿದ ಫ್ರೀ- ಕಾಲ್- ಆಡಿಯೋ ಜಾಹೀರಾತುಗಳು ಮತ್ತು ಕಾಲರ್- ಟ್ಯೂನ್‌ಗಳನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಲಾಗುವುದು ಎಂದು ಕೇಂದ್ರ ಸರಕಾರ ತಿಳಿಸಿದೆ. ಫೋನ್ ಕರೆಗಳನ್ನು ಮಾಡುವಾಗ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕಾಲರ್ ಟ್ಯೂನ್‌ಗಳನ್ನು ಅಮಾನತುಗೊಳಿಸಲು ಕೇಂದ್ರವು ಪರಿಗಣಿಸುತ್ತಿದ್ದು, ದೂರಸಂಪರ್ಕ ಇಲಾಖೆ […]