ತುಮಕೂರು: ಕಾಲು ಜಾರಿ ಬಾವಿಗೆ ಬಿದ್ದು ಪತ್ರಕರ್ತ ರೋಹಿತ್ ಸಾವು
ತುಮಕೂರು: ರಜೆ ಕಳೆಯಲು ಊರಿಗೆ ತೆರಳಿದ್ದ ಪತ್ರಕರ್ತ ರೋಹಿತ್(36) ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಇಲ್ಲಿನ ಕ್ಯಾತ್ಸಂದ್ರ ಸಮೀಪದ ಸದರನಹಳ್ಳಿಯಲ್ಲಿ ತೋಟವೊಂದರ ಬಾವಿಯಲ್ಲಿ ಈಜಲು ತೆರಳಿದ್ದಾಗ ಘಟನೆ ಸಂಭವಿಸಿದೆ. ರೋಹಿತ್ ಟೈಮ್ಸ್ ಆಫ್ ಇಂಡಿಯಾ ವರದಿಗಾರರಾಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ರಜೆ ಇದ್ದ ಕಾರಣಕ್ಕೆ ತಮ್ಮ ತಂದೆಯ ಊರಾದ ಸದರನಹಳ್ಳಿಗೆ ಬಂದಿದ್ದರು. ಸ್ನೇಹಿತರೊಂದಿಗೆ ತಮ್ಮ ತೋಟದ ಬಾವಿಯಲ್ಲಿ ಈಜಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದಿದ್ದಾರೆ. ಈ ವೇಳೆ ಬಾವಿಯ […]