ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆ ತುಳು; ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಆಗ್ರಹಿಸಿ ಹೋರಾಟಕ್ಕೆ ತುಳು ಸಂಘನೆಗಳ ನಿರ್ಧಾರ

ಮಂಗಳೂರು: ತುಳು ಭಾಷೆಯನ್ನು ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು, ತುಳುವನ್ನು ಸಂವಿಧಾನದ ಎಂಟನೇ ಪರಿಚ್ಚೇದಕ್ಕೆ ಸೇರಿಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿ ಹೋರಾಟ ರೂಪಿಸಲು ವಿವಿಧ ತುಳು ಸಂಘಟನೆಗಳು ನಿರ್ಧರಿಸಿವೆ. ತುಳುವಿನ ವಿವಿಧ ಸಂಘಟನೆಗಳ ಪ್ರಮುಖರು ಹೋರಾಟದ ರೂಪರೇಷೆಗಳ ಕುರಿತು ಮಂಗಳೂರಿನ ತುಳುಭವನದಲ್ಲಿ ಬುಧವಾರ ಸಮಾಲೋಚನೆ ನಡೆಸಲಾಯಿತು. ಸಮಾಲೋಚನೆ ಸಭೆಯನ್ನು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶೀಯ ಮೊಕ್ತೇಸರ ಹಾಗೂ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಉದ್ಘಾಟಿಸಿದರು. ಸಭೆಯನ್ನು ಆಯೋಜಿಸಿದ್ದ ಮಾಜಿ ಶಾಸಕ ಮೊಹಿಯುದ್ದೀನ್‌ ಬಾವ, ್ತುಳುವಿಗೆ ರಾಜ್ಯದಲ್ಲಿ ಅಧಿಕೃತ […]

ಬೆಳ್ತಂಗಡಿ: ನಮ್ಮ ಪ್ರಧಾನಿಗ್ ತುಳುವೆರೆ ಪೋಸ್ಟ್ ಕಾರ್ಡ್ ಅಭಿಯಾನಕ್ಕೆ ಚಾಲನೆ

ಬೆಳ್ತಂಗಡಿ : “ನಮ್ಮ ಪ್ರಧಾನಿಗ್ ತುಳುವೆರೆ ಪೋಸ್ಟ್ ಕಾರ್ಡ್” ಅಭಿಯಾನವನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಡಿ ಪ್ರದೇಶವಾದ ಬಂಜಾರು ಮಲೆಯ ತುಳುನಾಡಿನ ಮೂಲ ಜನಾಂಗದ ಆದಿವಾಸಿಗಳು ವಾಸಿಸುವಂತಹ ಪ್ರದೇಶದಿಂದ ಚಾಲನೆ ನೀಡಲಾಯಿತು. ಸೆಪ್ಟೆಂಬರ್ 1ರಂದು ಪ್ರಾರಂಭವಾದ ಈ ಅಭಿಯಾನ ಗುರುವಾರದಿಂದ ಸಕ್ರಿಯವಾಗಿ ಕಾರ್ಯ ನಿರ್ವಹಿಸಲಿದ್ದು ಸುಮಾರು 1 ಲಕ್ಷಕ್ಕೂ ಮೀರಿದ ಪೋಸ್ಟ್ ಕಾರ್ಡ್ ಗಳನ್ನು ತುಳು ಭಾಷೆಯ ಮಾನ್ಯತೆಗಾಗಿ ದೇಶದ ಪ್ರಧಾನಿಯವರಿಗೆ ಕಳುಹಿಸುವ ಗುರಿಯನ್ನು ಹೊಂದಿದೆ. ಈ ಅಭಿಯಾನಕ್ಕೆ ಎಲ್ಲಾ ಸಂಘ ಸಂಸ್ಥೆಗಳ ಬೆಂಬಲವನ್ನು […]

ಮಂಗಳೂರು: “ನಮ್ಮ ಪ್ರಧಾನಿಗ್ ತುಳುವೆರೆ ಪೋಸ್ಟ್ ಕಾರ್ಡ್” ಅಭಿಯಾನಕ್ಕೆ ಚಾಲನೆ

ಮಂಗಳೂರು: ತುಳು ಬಾಷೆಗೆ ಮಾನ್ಯತೆ ಸಿಗಬೇಕು ಮತ್ತು ತುಳು ಭಾಷೆಯನ್ನು 8 ನೇ ಪರಿಚ್ಚೇದಕ್ಕೆ ಸೇರಿಸಬೇಕು ಎಂಬ ತುಳುವರ ಬೇಡಿಕೆಯನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಪೋಸ್ಟ್ ಕಾರ್ಡ್ ಮೂಲಕ ತಿಳಿಸುವ ವಿಭಿನ್ನ ಯೋಜನೆಯನ್ನು ತುಳುವೆರ್ ಕುಡ್ಲ ತುಳು ಸಂಘಟನೆ, ತುಳುನಾಡು ವಾರ್ತೆ ವಾರ ಪತ್ರಿಕೆ ಮತ್ತು ನಮ್ಮ ಟಿ.ವಿ ಸಹಯೋಗದಲ್ಲಿ ಸೆಪ್ಟೆಂಬರ್ 1 ಗುರುವಾರದಂದು ತುಳುನಾಡಿನ ತುತ್ತ ತುದಿಯಾದ ಬೆಳ್ತಂಗಡಿ ತಾಲೂಕಿನ ಬಂಜಾರು ಮಲೆ ಎಂಬ ಪ್ರದೇಶದಲ್ಲಿ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಈ ಅಭಿಯಾನವು 1 ಲಕ್ಷಕ್ಕೂ ಅಧಿಕ […]