ಟಿವಿ ಚಾನೆಲ್ ಗಳ ಟಿಆರ್ ಪಿ ರೇಟಿಂಗ್ ತಾತ್ಕಾಲಿಕವಾಗಿ ಸ್ಥಗಿತ: ಬಿಎಆರ್ ಸಿ ಘೋಷಣೆ
ಮುಂಬೈ: ಟಿವಿ ರೇಟಿಂಗ್ ಪಾಯಿಂಟ್ಸ್ (ಟಿಆರ್ ಪಿ) ಹಗರಣ ಹಿನ್ನೆಲೆಯಲ್ಲಿ ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ (ಬಿಎಆರ್ ಸಿ) ದೇಶಾದ್ಯಂತ ಸುದ್ದಿ ವಾಹಿನಿಗಳ ವಾರದ ರೇಟಿಂಗ್ಸ್ ನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಸುದ್ದಿವಾಹಿನಿಗಳ ರೇಟಿಂಗ್ ಗಳ ಸಂಖ್ಯಾಶಾಸ್ತ್ರೀಯ ದೃಢತೆ, ಪಾರದರ್ಶಕತೆಯನ್ನು ಸುಧಾರಿಸಲು ಪ್ರಸ್ತುತ ಅಳತೆಯ ಮಾನದಂಡಗಳನ್ನು ಪರಿಶೀಲಿಸಲು ಇನ್ನು 12 ವಾರಗಳವರೆಗೆ ಅಂದರೆ ಮೂರು ತಿಂಗಳ ಕಾಲ ಸಾಪ್ತಾಹಿಕ ರೇಟಿಂಗ್ ಅನ್ನು ಸ್ಥಗಿತಗೊಳಿಸಲಾಗುವುದು ಎಂದು ಮಂಡಳಿ ತಿಳಿಸಿದೆ.