ತ್ರಿಶಾ ಸಮೂಹ ಸಂಸ್ಥೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಕಸನ ಶಿಬಿರ

ಉಡುಪಿ: ಕಳೆದ ಇಪತ್ನಾಲ್ಕು ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗೈದಿರುವ ತ್ರಿಶಾ ಸಂಸ್ಥೆಯು ಈ ಬಾರಿ ವಿಶೇಷವಾಗಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಕಸನ ಎನ್ನುವ ಏಳು ದಿನಗಳ ಉಚಿತ ಶಿಬಿರವನ್ನು ಆಯೋಜಿಸಿದೆ. ಈ ಶಿಬಿರವು ಅಕ್ಟೋಬರ್ 6 ರಿಂದ 12 ರವರೆಗೆ ನಡೆಯಲಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯನ್ನು ಕೇಂದ್ರವಾಗಿರಿಸಿಕೊಂಡು ಆಯೋಜಿಸಿರುವ ಈ ಶಿಬಿರದಲ್ಲಿ ಆಧುನಿಕತೆಯಲ್ಲಿ ವಿಜ್ಞಾನದ ಪಾತ್ರ, ವಾಣಿಜ್ಯ ಕ್ಷೇತ್ರದಲ್ಲಿನ ಅಪೂರ್ವ ಸಾಧ್ಯತೆಗಳು, ಒತ್ತಡ ನಿರ್ವಹಣೆ, ಬದುಕಿನಲ್ಲಿ ಕಲಾ ವೈವಿಧ್ಯಗಳ ಕೊಡುಗೆ, ಸಂಗೀತ, ಯಕ್ಷಗಾನ ಇನ್ನೂ ಮುಂತಾದ […]