24ನೇ ವರ್ಷದ ತ್ರಿಶಾ ದಿನಾಚರಣೆ: ಎರಡು ದಶಕಗಳಿಗೂ ಹೆಚ್ಚು ಕಾಲ ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ನಡೆಸಿದ ಸಾಧನೆ

ಉಡುಪಿ: ಬದುಕಿನಲ್ಲಿ ಇದಿರಾದ ಕಾಠಿಣ್ಯವನ್ನೆಲ್ಲಾ ಸವಾಲಾಗಿ ಸ್ವೀಕರಿಸಿ ಎರಡು ದಶಕಗಳಿಗೂ ಹೆಚ್ಚು ಕಾಲ ಸಾವಿರಾರು ವಿದ್ಯಾರ್ಥಿ ಸಂದೋಹವನ್ನು ಸಲಹಿದ ಮತ್ತು ಸಲಹುತ್ತಿರುವ ತ್ರಿಶಾ ಸಂಸ್ಥೆಯು 24 ವರುಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ತ್ರಿಶಾ ವಿದ್ಯಾ ಕಾಲೇಜು ಕಟಪಾಡಿಯಲ್ಲಿ ಆಯೋಜಿಸಿದ್ದ ತ್ರಿಶಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಸಿ.ಎ ಗೋಪಾಲಕೃಷ್ಣ ಭಟ್, ಈ ಸುಧೀರ್ಘ ಪಯಣದಲ್ಲಿ ಸೋಲು-ಗೆಲುವುಗಳನ್ನು ಜೊತೆ ಸೇರಿಸಿಕೊಂಡು ಮುಂದೆ ಸಾಗುವುದು ಹೇಗೆ ಎನ್ನುವುದನ್ನು ಜೀವನ ಕಲಿಸಿಕೊಟ್ಟಿದೆ ಎಂದು ತಮ್ಮ ಜೀವನದ […]