ಬುಡಕಟ್ಟು ಜನಾಂಗದವರನ್ನು ಯುಸಿಸಿ ವ್ಯಾಪ್ತಿಯಿಂದ ಹೊರಗಿಡಲು ಚರ್ಚಿಸಿದ ಸಂಸದೀಯ ಸಮಿತಿ; ಯುಸಿಸಿ ಅಗತ್ಯವಿಲ್ಲ ಎಂದ ಕಾಂಗ್ರೆಸ್ ಮತ್ತು ಡಿ.ಎಂ.ಕೆ

ನವದೆಹಲಿ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ವಿಷಯವನ್ನು ಹೊಸದಾಗಿ ಪರಿಶೀಲಿಸಬೇಕು ಎಂದು ಸಂಸದೀಯ ಸಮಿತಿಯ ಮುಂದೆ ಭಾರತೀಯ ಕಾನೂನು ಆಯೋಗವು ಸೋಮವಾರ ವಿಷಯವನ್ನು ಪ್ರಸ್ತಾಪಿಸಿದೆ. ಯುಸಿಸಿ “ಈ ಹಂತದಲ್ಲಿ ಅಗತ್ಯವೂ ಅಲ್ಲ ಅಥವಾ ಅಪೇಕ್ಷಣೀಯವೂ ಅಲ್ಲ” ಎಂದು 2018 ರಲ್ಲಿ ಆಯೋಗ ಅಭಿಪ್ರಾಯ ಪಟ್ಟಿದೆ. ಕಾಂಗ್ರೆಸ್, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸೇರಿದಂತೆ ಕೆಲವು ವಿರೋಧ ಪಕ್ಷಗಳು ಯುಸಿಸಿ ಅನುಷ್ಠಾನವನ್ನು ಬೆಂಬಲಿಸುತ್ತಿಲ್ಲ. ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಕಾನೂನು […]