ಐಟಿ ಬಿಟಿ ಕಂಪನಿಗಳಿಗಿಂತಲೂ ಶ್ರೀಮಂತ ತಿರುಮತಿ ತಿಮ್ಮಪ್ಪ: ದೇವಸ್ಥಾನದ ನಿವ್ವಳ ಮೌಲ್ಯ 2.5 ಲಕ್ಷ ಕೋಟಿ ರೂಪಾಯಿಗಳು

ಹೈದರಾಬಾದ್: ತಿರುಪತಿಯ ಜಗತ್ಪ್ರಸಿದ್ಧ ವೆಂಕಟೇಶ್ವರ ದೇವಸ್ಥಾನದ ನಿವ್ವಳ ಮೌಲ್ಯ ರೂ 2.5 ಲಕ್ಷ ಕೋಟಿ (ಸುಮಾರು 30 ಶತಕೋಟಿ ಡಾಲರ್) ಯಾಗಿದ್ದು ಇದು ದೇಶದ ಐಟಿ ಸೇವಾ ಸಂಸ್ಥೆಯಾದ ವಿಪ್ರೋ, ಆಹಾರ ಮತ್ತು ಪಾನೀಯ ಕಂಪನಿ ನೆಸ್ಲೆ ಮತ್ತು ಸರ್ಕಾರಿ ಸ್ವಾಮ್ಯದ ತೈಲ ದೈತ್ಯ ಒ.ಎನ್.ಜಿ.ಸಿ ಮತ್ತು ಐಒಸಿ ಅಂತಹ ಕಂಪನಿಗಳ ಮಾರುಕಟ್ಟೆ ಮೌಲ್ಯಕ್ಕಿಂತಲೂ ಹೆಚ್ಚಾಗಿದೆ ಎನ್ನಲಾಗಿದೆ. 1933 ರಲ್ಲಿ ಸ್ಥಾಪನೆಯಾದ ಆಡಳಿತ ಮಂಡಳಿ ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ)ಟ್ರಸ್ಟ್ ಇದೇ ಮೊದಲ ಬಾರಿಗೆ ತಿರುಪತಿಯ ಪ್ರಧಾನ ದೇವರ […]