ಪೆರ್ಡೂರು: ಟಿಪ್ಪರ್ ಡಿಕ್ಕಿ ಹೊಡೆದು ವೃದ್ಧ ಸ್ಥಳದಲ್ಲೇ ಸಾವು

ಪೆರ್ಡೂರು: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧರೋರ್ವರಿಗೆ ಟಿಪ್ಪರ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಪೆರ್ಡೂರು ಮೇಲ್ಪೇಟೆಯ ಬಿಎಮ್ ಸ್ಕೂಲ್ ಎದುರು ಇಂದು ಬೆಳಿಗ್ಗೆ ನಡೆದಿದೆ. ಮೃತರನ್ನು ಅಲಂಕಾರು ನಿವಾಸಿ 70 ವರ್ಷದ ಮಂಜಯ್ಯ ಶೆಟ್ಟಿ ಎಂದು ಗುರುತಿಸಲಾಗಿದೆ. ಪೆರ್ಡೂರಿನಿಂದ ಹಿರಿಯಡಕ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಒಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಂಜಯ್ಯ ಶೆಟ್ಟಿಗೆ ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ ರಸ್ತೆಗೆ ಬಿದ್ದ ಮಂಜಯ್ಯ ಶೆಟ್ಟಿ ಅವರ ತಲೆ ಮೇಲೆ ಟಿಪ್ಪರ್ ನ ಚಕ್ರ […]
ಕುಸಿದ ಕಾಂಕ್ರೀಟ್ ರಸ್ತೆ; ಪಲ್ಟಿಯಾಗಿ ಹೊಳೆಗೆ ಬಿದ್ದ ಟಿಪ್ಪರ್

ಉಡುಪಿ: ಕಾಂಕ್ರೀಟ್ ರಸ್ತೆ ಕುಸಿದ ಪರಿಣಾಮ ಚಲಿಸುತ್ತಿದ್ದ ಟಿಪ್ಪರೊಂದು ಪಲ್ಟಿಯಾಗಿ ಸಮೀಪದ ಹೊಳೆಗೆ ಬಿದ್ದ ಘಟನೆ ಉಡುಪಿ ಸಮೀಪದ ಕಿದಿಯೂರು ಸಂಕೇಶ್ವರ ರಸ್ತೆ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ. ಮಣ್ಣು ತುಂಬಿದ ಟಿಪ್ಪರೊಂದು ಸಂಚರಿಸುತ್ತಿದ್ದಾಗ ಕಾಂಕ್ರೀಟ್ ರಸ್ತೆ ಕುಸಿದು ಪಲ್ಟಿಯಾಯಿತು ಎಂದು ತಿಳಿದುಬಂದಿದೆ. ರಸ್ತೆಯಲ್ಲಿ ಬಿರುಕು ಬಿಟ್ಟಿದ್ದು, ಸಂಪೂರ್ಣವಾಗಿ ಕುಸಿದ ಪರಿಣಾಮ ಟಿಪ್ಪರ್ ಸಮೀಪದ ಕಲ್ಮಾಡಿ ಹೊಳೆಗೆ ಉರುಳಿ ಬಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.