ಮಣಿಪಾಲ: ದ ರಾಯೋ ಮಾಬೆನ್ ಡಿಸೈನರ್ ಸ್ಟುಡಿಯೋ ಉದ್ಘಾಟನೆ

ಮಣಿಪಾಲ: ಉಡುಪಿ-ಮಣಿಪಾಲದ ಜನರಿಗಾಗಿ ಲಕ್ಷ್ಮೀಂದ್ರನಗರದ ಪ್ರೀಮಿಯರ್ ಅಪ್ ಟೌನ್ ನಲ್ಲಿ ದ ರಾಯೋ ಮಾಬೆನ್ ಡಿಸೈನರ್ ಸ್ಟುಡಿಯೋ ಇದರ ಉದ್ಘಾಟನೆಯು ಡಿ.18 ಭಾನುವಾರದಂದು ನಡೆಯಿತು. ಸ್ಟುಡಿಯೋವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಮ್ಮ ಊರಿನ ಹುಡುಗಿಯೊಬ್ಬಳು ಇಷ್ಟು ಉತ್ತಮ ಸಾಧನೆ ಮಾಡಿರುವುದನ್ನು ನೋಡಿದಾಗ ನನಗೆ ಹೆಮ್ಮೆ ಎನಿಸಿತು. ಆಕೆ ತಾನೇ ಖುದ್ದು ವಿನ್ಯಾಸ ಮಾಡಿರುವ ವಸ್ತ್ರಗಳನ್ನು ನೋಡಲು ಸಂತೋಷವಾಯಿತು. ಆಕೆಯ ಪ್ರತಿಭೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಉಡುಪಿಯ ಜನತೆ ಗುಣಮಟ್ಟದ ವಸ್ತುಗಳನ್ನು ಖರೀದಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ. ರಿಯಾ […]