ನೆದರ್‌ಲ್ಯಾಂಡ್ಸ್‌ನ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ ದಿ ಕೇರಳ ಸ್ಟೋರಿ

ಹಲವು ರಾಜ್ಯಗಳಿಂದ ಪ್ರತಿರೋಧದ ಬಳಿಕವೂ ಭಾರತದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿರುವ ದಿ ಕೇರಳ ಸ್ಟೋರಿ ಅದಾಗಲೇ 160 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು, 200 ಕೋಟಿ ಕ್ಲಬ್ ಸೇರಲು ತಯಾರಾಗಿದೆ. ಚಿತ್ರವು ಮೇ 12 ರಂದು 37 ದೇಶಗಳಲ್ಲಿ ಅಂತಾರಾಷ್ಟ್ರೀಯವಾಗಿ ಬಿಡುಗಡೆಯಾಗಿದೆ. ಕೇರಳ ಸ್ಟೋರಿಯ ಒಟ್ಟು ಕಲೆಕ್ಷನ್ ಈಗ 165.94 ಕೋಟಿ ರೂಗಳಾಗಿವೆ. ಏತನ್ಮಧ್ಯೆ, ನೆದರ್‌ಲ್ಯಾಂಡ್ಸ್‌ನ ಚಿತ್ರಮಂದಿರಗಳಲ್ಲಿ ದಿ ಕೇರಳ ಸ್ಟೋರಿ ಪ್ರದರ್ಶನ ಕಾಣಲಿದೆ ಎಂದು ಅಲ್ಲಿನ ಸಂಸತ್ ಸದಸ್ಯ ಗೀರ್ಟ್ ವೈಲ್ಡರ್ಸ್ ಹೇಳಿದ್ದಾರೆ. ಭಯೋತ್ಪಾದನೆಯ ವಿರುದ್ದ […]
ಮೇ 22 ರಂದು ವಿಹಿಂಪ ವತಿಯಿಂದ ಐನಾಕ್ಸ್ ಚಿತ್ರಮಂದಿರದಲ್ಲಿ ಯುವತಿಯರಿಗಾಗಿ ‘ದಿ ಕೇರಳ ಸ್ಟೋರಿ’ ಉಚಿತ ಪ್ರದರ್ಶನ

ಮಣಿಪಾಲ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಪೆರ್ಡೂರು ಇವರ ವತಿಯಿಂದ ದಿ ಕೇರಳ ಸ್ಟೋರಿ ಸಿನೆಮಾದ ಉಚಿತ ಪ್ರದರ್ಶನವನ್ನು 18 ವರ್ಷ ಮೇಲ್ಪಟ್ಟ ಹಿಂದೂ ಸಹೋದರಿಯರಿಗೆ, ಮೇ 22 ಸೋಮವಾರ ಬೆಳಿಗ್ಗೆ 10.15 ಕ್ಕೆ ಮಣಿಪಾಲ ಪಿ.ವಿ.ಆರ್.ಐನಾಕ್ಸ್ (PVR INOX) ಥಿಯೇಟರ್ ನಲ್ಲಿ ನಿಗದಿಪಡಿಸಲಾಗಿದೆ. ಆಸಕ್ತರು ಮೇ 21 ಭಾನುವಾರದ ಒಳಗೆ ತಮ್ಮ ಹೆಸರನ್ನು ನೋಂದಾಯಿಸಬೇಕಾಗಿ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ವಿಶ್ವ ಹಿಂದೂ ಪರಿಷದ್ ಬಜರಂಗದಳ ಪೆರ್ಡೂರು 9916810202/ 9535057073/ 9972968651
ದಿ ಕೇರಳ ಸ್ಟೋರಿ: ಆರನೇ ದಿನದಂದು 68.86 ಕೋಟಿ ರೂ ಗಳಿಕೆ

ಕೇರಳದ ಹಿಂದೂ ಮಹಿಳೆಯ ಮತಾಂತರ ಮತ್ತು ಭಯೋತ್ಪಾದಕ ಸಂಘಟನೆ ಐಸಿಸ್ ಸುತ್ತ ಸುತ್ತುವ ಅದಾ ಶರ್ಮಾ ಅಭಿನಯದ ದಿ ಕೇರಳ ಸ್ಟೋರಿ ಚಲಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿದ್ದು, ಆರನೇ ದಿನಕ್ಕೆ 60 ಕೋಟಿ ಮೈಲಿಗಲ್ಲನ್ನು ದಾಟಿದೆ. ಸುದೀಪ್ತೋ ಸೇನ್ ನಿರ್ದೇಶನ ಹಾಗೂ ವಿಪುಲ್ ಶಾಹ್ ನಿರ್ಮಾಣದ ಈ ಚಿತ್ರವು ಮೇ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಕೇರಳ ಸ್ಟೋರಿ ಮೊದಲ ದಿನವೇ 8 ಕೋಟಿ ಗಳಿಸಿತ್ತು. ಇದು 2023 ರಲ್ಲಿ ಶಾರುಖ್ ಖಾನ್ […]
ದಿ ಕೇರಳ ಸ್ಟೋರಿ: ಬಂಗಾಳದಲ್ಲಿ ನಿಷೇಧ; ಉತ್ತರ ಪ್ರದೇಶದಲ್ಲಿ ತೆರಿಗೆ ಮುಕ್ತ

ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ‘ದಿ ಕೇರಳ ಸ್ಟೋರಿ’ ಚಿತ್ರವನ್ನು ತೆರಿಗೆ ಮುಕ್ತಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳವಾರ ಘೋಷಿಸಿದ್ದಾರೆ. ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಚಲನಚಿತ್ರವನ್ನು ನಿಷೇಧಿಸಿದ ಒಂದು ದಿನದ ನಂತರ ಆದಿತ್ಯನಾಥ್ ಅವರ ಘೋಷಣೆ ಹೊರಬಿದ್ದಿದೆ. ‘ದಿ ಕೇರಳ ಸ್ಟೋರಿ’ಯನ್ನು ನಿಷೇಧಿಸುವ ನಿರ್ಧಾರವನ್ನು ಪಶ್ಚಿಮ ಬಂಗಾಳ ಸರ್ಕಾರ ಸೋಮವಾರ ಪ್ರಕಟಿಸಿದೆ. ರಾಜ್ಯದಲ್ಲಿ ಪ್ರದರ್ಶನಗೊಳ್ಳುತ್ತಿರುವ ಪರದೆಗಳಿಂದ ಚಲನಚಿತ್ರವನ್ನು ತೆಗೆದುಹಾಕುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಮಮತಾ ಬ್ಯಾನರ್ಜಿ ನಿರ್ದೇಶನ ನೀಡಿದ್ದಾರೆ. “ಬಂಗಾಳದಲ್ಲಿ ಶಾಂತಿ […]
ದಿ ಕೇರಳ ಸ್ಟೋರಿ ಚಿತ್ರದ ಪ್ರದರ್ಶನಕ್ಕೆ ತಡೆ ನೀಡಲು ಕೇರಳ ಹೈಕೋರ್ಟ್ ನಕಾರ

ತಿರುವನಂತಪುರಂ: ಶುಕ್ರವಾರ ಮಧ್ಯಂತರ ಆದೇಶ ನೀಡಿದ ಕೇರಳ ಹೈಕೋರ್ಟ್, ‘ದಿ ಕೇರಳ ಸ್ಟೋರಿ’ ಚಿತ್ರದ ಪ್ರದರ್ಶನಕ್ಕೆ ತಡೆ ನೀಡಬೇಕೆಂಬ ಬೇಡಿಕೆಯನ್ನು ತಿರಸ್ಕರಿಸಿದೆ ಮತ್ತು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ) ನೀಡಿದ ‘ಎ’ ಪ್ರಮಾಣೀಕರಣವನ್ನು ಕಾನೂನುಬಾಹಿರ ಎಂದು ಘೋಷಿಸಲು ನಿರಾಕರಿಸಿದೆ. ನಾಗರೇಶ್ ಮತ್ತು ಸೋಫಿ ಥಾಮಸ್ ಅವರಿದ್ದ ವಿಭಾಗೀಯ ಪೀಠವು ವಿವಿಧ ಸಂಘಟನೆಗಳ ಪ್ರತಿಭಟನೆಯ ನಡುವೆ ಶುಕ್ರವಾರ ಕೇರಳದಲ್ಲಿ ಬಿಡುಗಡೆಯಾದ ಚಲನಚಿತ್ರದ ಪ್ರದರ್ಶನವನ್ನು ನಿಷೇಧಿಸಲು ಆದೇಶ ನೀಡುವಂತೆ ಕೋರಿ ಸಲ್ಲಿಸಲಾದ ರಿಟ್ ಅರ್ಜಿಗಳ ವಿಚಾರಣೆ ನಡೆಸುತ್ತಿದೆ. […]