ಅನುಷ್ಕಾ ನಟನೆಯ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ

ನಿರ್ದೇಶಕ ಮಹೇಶ್ ಬಾಬು ಪಿ ಅವರ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಎಂಬ ಚಿತ್ರಕ್ಕಾಗಿ ನಟಿ ಅನುಷ್ಕಾ ಶೆಟ್ಟಿ ಮತ್ತು ನಟ ನವೀನ್ ಪೋಲಿಶೆಟ್ಟಿ ಜೊತೆಯಾಗಿದ್ದಾರೆ. ಚಿತ್ರದ ಮೊದಲ ಪೋಸ್ಟರ್ ಅನ್ನು ಬುಧವಾರ ಅನಾವರಣಗೊಳಿಸಲಾಗಿದ್ದು, ಸಮಕಾಲೀನ ಪ್ರೇಮಕಥೆಯ ಕಥಾಹಂದರದ ತುಣುಕನ್ನು ನೀಡುತ್ತದೆ. ಪೋಸ್ಟರ್ ಇಬ್ಬರು ವ್ಯಕ್ತಿಗಳ ಕೊಲಾಜ್ ಅನ್ನು ತೋರಿಸುತ್ತಿದ್ದು, ಇಬ್ಬರೂ ತಮ್ಮ ಜೀವನದ ವಿಭಿನ್ನ ಹಂತದಲ್ಲಿದ್ದಾರೆ ಎಂದು ತೋರುತ್ತದೆ. ಅನುಷ್ಕಾ ಲಂಡನ್‌ನಲ್ಲಿ ವಾಸಿಸುತ್ತಿದ್ದು, ‘ಹ್ಯಾಪಿ ಸಿಂಗಲ್’ ಎಂದು ಬರೆದಿರುವ ಪುಸ್ತಕ ಕೈಯಲ್ಲಿದ್ದರೆ, ಹೈದರಾಬಾದ್‌ ಹುಡುಗನ ಪಾತ್ರದಲ್ಲಿರುವ […]

ನವೆಂಬರ್ ಎರಡನೇ ವಾರದಿಂದ ಚಿತ್ರೀಕರಣ ಆರಂಭಿಸಲಿರುವ ಪುಷ್ಪಾ: ದಿ ರೂಲ್ ತಂಡ: ಸಿನಿರಸಿಕರಲ್ಲಿ ಕುತೂಹಲ ಕೆರಳಸಿರುವ ಪುಷ್ಪಾ ಭಾಗ-2

ಹೈದರಾಬಾದ್: ದಕ್ಷಿಣ ಭಾರತದ ನಟ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ: ದಿ ರೂಲ್’ ಚಿತ್ರದ ಚಿತ್ರೀಕರಣ ಭಾನುವಾರ ಆರಂಭವಾಗಿದೆ. ಚಿತ್ರದ ಛಾಯಾಗ್ರಾಹಕ ಕುಬಾ ಬ್ರೋಜೆಕ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಚಿತವ್ವೊಂದನ್ನು ಹಂಚಿಕೊಂಡಿದ್ದಾರೆ. ನಟನಿಗೆ ಧನ್ಯವಾದ ಹೇಳುತ್ತಾ “ಸಾಹಸ ಪ್ರಾರಂಭವಾಗಿದೆ” ಎಂಬ ಶೀರ್ಷಿಕೆಯೊಂದಿಗೆ ಛಾಯಾಗ್ರಾಹಕ ಚಿತ್ರವನ್ನು ಹಾಕಿದ್ದಾರೆ. ಚಿತ್ರದಲ್ಲಿ ಅಲ್ಲು ಅರ್ಜುನ್ ದಪ್ಪನಾದ ಗಡ್ಡ ಹೊಂದಿದ್ದು, ಸಾದಾ ಬಿಳಿ ಟೀ ಶರ್ಟ್ ಧರಿಸಿದ್ದಾರೆ. ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿನಿರಸಿಕರು ಚಿತ್ರದ ಬಗ್ಗೆ ಉತ್ಸುಕರಾಗಿದ್ದಾರೆ. ನಿಜವಾದ ಕಥೆ ಇರುವುದೇ […]

ಪುಷ್ಪಾ ದ ರೂಲ್ ಗೆ ಜೈ ಎಂದ ವಿಜಯ್ ಸೇತುಪತಿ? ಪುಷ್ಪಾ ಭಾಗ-2ರಲ್ಲಿ ಖಳನಾಯಕನಾಗಿ ಮಿಂಚಲಿರುವ ವೇಧ!

ಪುಷ್ಪಾ ಭಾಗ-2, ಪುಷ್ಪಾ ದ ರೂಲ್ ನಲ್ಲಿ ವಿಕ್ರಮ್ ವೇಧ ಖ್ಯಾತಿಯ ವಿಜಯ್ ಸೇತುಪತಿ ನಟಿಸಲಿದ್ದಾರೆ ಎಂದು ವರದಿಯಾಗಿದೆ. ವಿಜಯ್ ಸೇತುಪತಿ ಮುಖ್ಯ ಖಳನಾಯಕನಾಗಿ ನಟಿಸಲಿದ್ದಾರೆ ಹಾಗೂ ಫಹಾದ್ ಫಾಸಿಲ್ ಪೋಲೀಸ್ ಪಾತ್ರದಲ್ಲಿ ಮುಂದುವರೆಯಲಿದ್ದಾರೆ ಎನ್ನಲಾಗಿದೆ. ಎಲ್ಲವೂ ಸರಿಯಾಗಿದ್ದರೆ ವಿಜಯ್ ಪುಷ್ಪಾ-1 ರಲ್ಲಿ ಅರಣ್ಯಾಧಿಕಾರಿಯ ಪ್ರಾತ್ರವನ್ನು ಮಾಡಬೇಕಿತ್ತು. ಆದರೆ ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಅವರು ಚಿತ್ರವನ್ನು ಒಪ್ಪಿಕೊಂಡಿರಲಿಲ್ಲ. ಪುಷ್ಪ ಭಾಗ ಎರಡಲ್ಲಿ ವಿಜಯ್ ನಟಿಸುವ ಬಗ್ಗೆ ಅಧಿಕೃತ ದೃಢೀಕರಣ ಇನ್ನೂ ಬಂದಿಲ್ಲವಾದರೂ, ಈ ಸುದ್ದಿಯು ಅಭಿಮಾನಿಗಳನ್ನು ರೋಮಾಂಚನಗೊಳಿಸಿದೆ.