ಒಮ್ಮೆ ನಿಮ್ಮ ನೆನಪಿನ ಜೋಳಿಗೆ ಬಿಚ್ಚಿ,ಪಾಠ ಕಲಿಸಿದ ಗುರುವನ್ನು ಮನಸಾರೆ ನಮಿಸಿ:

ಅಮ್ಮನ ಅಪ್ಪುಗೆಯಿಂದ, ಅಪ್ಪನ ಅಕ್ಕರೆಯಿಂದ ಮಗು ಮುಂದಡಿ ಇಡುವುದು ತನ್ನ ಸುಂದರ ಭವಿಷ್ಯವನ್ನ ರೂಪಿಸುವ ವಿದ್ಯಾಮಂದಿರದತ್ತ. ತಂದೆ -ತಾಯಿ, ಬಂಧು-ಬಳಗದ ಕಾಳಜಿಯಲ್ಲಿ ಬೆಳದ ಮಗು, ಅಕ್ಷರಾಭ್ಯಾಸದ ಗುರಿಯಿಟ್ಟು ವಿದ್ಯಾಮಂದಿರಕ್ಕೆ ಕಾಲಿಟ್ಟಾಗ ಅದೇ ಅಕ್ಕರೆ ಆಪ್ತತೆಯಲ್ಲಿ, ಕಾಳಜಿಯಲ್ಲಿ ಕೈ ಹಿಡಿದು ಒಳ ಕರೆದು ಅದೇ ಸಲುಗೆ ಪ್ರೀತಿಯಲ್ಲಿ ಅಕ್ಕರೆ ಜೊತೆಗೆ ಅಕ್ಷರವ ಕಲಿಸಿ, ಅತ್ತಾಗ ಕಣ್ಣೋರೆಸಿ, ಮಾತು ತಪ್ಪಿದಾಗ ಗದರಿಸಿ, ನಮ್ಮೆಲ್ಲ ಬೇಕು ಬೇಡಗಳ ಜೊತೆಗೆ ಒಂದಿಷ್ಟು ಸಂಸ್ಕಾರ,ಶಿಸ್ತು, ಸಾಮಾಜಿಕ ಕಳಕಳಿ, ನೈತಿಕ ಮೌಲ್ಯವನ್ನ ನಮ್ಮೊಳಗೇ ಹುಟ್ಟುಹಾಕುವವರು ನಮ್ಮ […]