ಟಾಟಾ ಮೆಮೊರಿಯಲ್ ನ 100 ರೂ ಗಿಂತಲೂ ಕಡಿಮೆ ಬೆಲೆಯ ಸ್ಥಳೀಯ ಅರಿವಳಿಕೆಯಿಂದ ಸ್ತನ ಕ್ಯಾನ್ಸರ್ ರೋಗಿಗಳಿಗೆ ಜೀವದಾನ

ಮುಂಬೈ: ಮುಂಬೈ ಟಾಟಾ ಮೆಮೋರಿಯಲ್ ಸೆಂಟರ್ (ಟಿಎಂಸಿ) ನ ವೈದ್ಯರ ಒಂದು ದಶಕದ ಅವಧಿಯ ಅಧ್ಯಯನವು ಸ್ತನ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಸ್ವಲ್ಪ ಮೊದಲು ಸ್ಥಳೀಯ ಅರಿವಳಿಕೆ (0.5% ಲಿಡೋಕೇನ್) ಯನ್ನು ಕ್ಯಾನ್ಸರ್ ವಿರೋಧಿ ಏಜೆಂಟ್ ಆಗಿ ಬಳಸುವ ಸರಳ ಹಸ್ತಕ್ಷೇಪವು ಮರಣ ಮತ್ತು ಮರುಕಳಿಸುವಿಕೆಯ ಅಪಾಯವನ್ನು ಕ್ರಮವಾಗಿ 29% ಮತ್ತು 30% ದಷ್ಟು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ತೋರಿಸಿದೆ. ಪ್ರತಿ ವರ್ಷ, ಭಾರತದಲ್ಲಿ ಅಂದಾಜು 1,50,000 ಹೊಸ ಸ್ತನ ಕ್ಯಾನ್ಸರ್ ರೋಗಿಗಳು ಪತ್ತೆಯಾಗುತ್ತಾರೆ. ಇದರಲ್ಲಿ 90,000-1,00,000 […]