ತಮಿಳಿನಾಡಿನಲ್ಲಿ ಮತದಾನ ಪ್ರಕ್ರಿಯೆ ಪ್ರಾರಂಭ: ಮತದಾನ ಮಾಡಿದ ಸ್ಟಾಲಿನ್, ಅಣ್ಣಾಮಲೈ, ರಜನಿಕಾಂತ್

ಚೆನ್ನೈ: ಏಳು ಹಂತದ ಲೋಕಸಭೆ ಚುನಾವಣೆಯ(Loksabha Elections) ಮೊದಲ ಹಂತದ ಮತದಾನದಲ್ಲಿ ತಮಿಳುನಾಡಿನ ಎಲ್ಲಾ 39 ಸ್ಥಾನಗಳಿಗೆ ಶುಕ್ರವಾರ ಮತದಾನ ನಡೆಯುತ್ತಿದೆ. ತಮಿಳುನಾಡಿನಲ್ಲಿ ಪ್ರಮುಖ ಅಭ್ಯರ್ಥಿಗಳಾದ ರಾಜ್ಯ ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಕೊಯಮತ್ತೂರಿನಿಂದ ಡಿಎಂಕೆ ನಾಯಕ ಗಣಪತಿ ಪಿ ರಾಜ್‌ಕುಮಾರ್ ಮತ್ತು ಎಐಎಡಿಎಂಕೆಯ ಸಿಂಗೈ ರಾಮಚಂದ್ರನ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಚೆನ್ನೈ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ತಮಿಳಿಸೈ ಸೌಂದರರಾಜನ್ ಅವರು ಡಿಎಂಕೆಯ ತಮಿಳಚಿ ತಂಗಪಾಂಡಿಯನ್ ಮತ್ತು ಎಐಎಡಿಎಂಕೆಯ ಜೆ ಜಯವರ್ಧನ್ ಅವರನ್ನು ಎದುರಿಸಲಿದ್ದಾರೆ. ತಮಿಳುನಾಡು […]
ಆಟವಾಡುತ್ತಿದ್ದ ಮಕ್ಕಳಿಗೆ ದೊರೆಯಿತು ಚೋಳರ ಕಾಲದ 12 ನೇ ಶತಮಾನದ ಅಪರೂಪದ ಮುರುಗನ್ ವಿಗ್ರಹ!!

ಚೆನ್ನೈ: ತಮಿಳುನಾಡಿನ ತಿರುವಲಂಗಾಡು ಎಂಬ ಪ್ರದೇಶದ ಬಳಿ ಕೊಸಸ್ತಲೈಯಾರ್ ನದಿಪಾತ್ರದಲ್ಲಿ ಆಟವಾಡುತ್ತಿದ್ದ ಚಿಕ್ಕ ಹುಡುಗರ ಗುಂಪೊಂದಕ್ಕೆ 12 ನೇ ಶತಮಾನದ ಅಪರೂಪದ ಮುರುಗನ್ ಪ್ರತಿಮೆ ದೊರೆತಿದೆ. 150 ಕೆಜಿ ತೂಕ ಮತ್ತು 3.5 ಅಡಿ ಎತ್ತರದ ಮೂರ್ತಿ ವಿಶಿಷ್ಟ ಲಕ್ಷಣಗಳು ಮತ್ತು ಹತ್ತಿರದ ಕಲಾಕೃತಿಗಳೊಂದಿಗೆ ಮುರುಗನನ್ನು ‘ಬ್ರಹ್ಮಶಾಸ್ತ’ ಎಂದು ಚಿತ್ರಿಸುತ್ತದೆ. ಪುರಾತತ್ವ ಇಲಾಖೆಯು ವಿಗ್ರಹವನ್ನು ಸಂರಕ್ಷಿಸಿ ಸಾರ್ವಜನಿಕ ವೀಕ್ಷಣೆಗೆ ಇಟ್ಟಿದೆ. ಬ್ರಹ್ಮಶಾಸ್ತ ಎಂದು ಕರೆಯಲ್ಪಡುವ ದೇವತೆಯ ಅಪರೂಪವಾಗಿ ಕಾಣುವ ಅಭಿವ್ಯಕ್ತಿಯನ್ನು ಚಿತ್ರಿಸುವ ಜಪಮಾಲೆ ಮತ್ತು ಕಮಂಡಲದಿಂದ ಅಲಂಕರಿಸಲ್ಪಟ್ಟ […]
ಅಂತರಾಷ್ಟ್ರೀಯ ಡ್ರಗ್ಸ್ ಜಾಲದ ಕಿಂಗ್ ಪಿನ್ ತಮಿಳು ಚಿತ್ರ ನಿರ್ಮಾಪಕ ಜಾಫರ್ ಸಾದಿಕ್ ಬಂಧನ: ಎನ್‌ಸಿಬಿ ಕಾರ್ಯಾಚರಣೆ

ಚೆನ್ನೈ: 2,000 ಕೋಟಿ ರೂಪಾಯಿಗಳ ಮಾದಕವಸ್ತು ಕಳ್ಳಸಾಗಣೆ ದಂಧೆಯಲ್ಲಿ ಮಾಜಿ ಡಿಎಂಕೆ ನಾಯಕ ಮತ್ತು ತಮಿಳು ಚಲನಚಿತ್ರ ನಿರ್ಮಾಪಕ ಜಾಫರ್ ಸಾದಿಕ್ ನನ್ನು ಎನ್‌ಸಿಬಿ ಬಂಧಿಸಿದೆ. ಕಳೆದ ತಿಂಗಳು 2,000 ಕೋಟಿ ರೂ. ಮಾದಕ ವಸ್ತು ಕಳ್ಳಸಾಗಣೆ ದಂಧೆಗೆ ಸಂಬಂಧಿಸಿದಂತೆ ದ್ರಾವಿಡ ಮುನ್ನೇತ್ರ ಕಳಗಂ (DMK) ಮಾಜಿ ಪದಾಧಿಕಾರಿ ಮತ್ತು ತಮಿಳು ಚಲನಚಿತ್ರ ನಿರ್ಮಾಪಕ ಜಾಫರ್ ಸಾದಿಕ್ ನನ್ನು ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (NCB) ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. NCB ಉಪ ಮಹಾನಿರ್ದೇಶಕ (ಕಾರ್ಯಾಚರಣೆ) […]
‘ಕಾವೇರಿ’ದ ನೀರು ಬಿಡುಗಡೆ ಕಾದಾಟ: ವಿಶೇಷ ತುರ್ತು ಸಭೆ ಕರೆದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 5,000 ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಕರ್ನಾಟಕಕ್ಕೆ ಮಂಗಳವಾರ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಪ್ಟೆಂಬರ್ 13 ರಂದು “ವಿಶೇಷ ತುರ್ತು ಸಭೆ”ಗೆ ಕರೆ ನೀಡಿದ್ದಾರೆ. ತುರ್ತು ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಕಾವೇರಿ ಜಲಾನಯನ ಪ್ರದೇಶದ ಸಚಿವರು, ಎಲ್ಲ ಪಕ್ಷಗಳ ಮಾಜಿ ಮುಖ್ಯಮಂತ್ರಿಗಳು, ರಾಜ್ಯ ಸಂಪುಟದ ಹಿರಿಯ ಸಚಿವರು, ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರು […]
ಪುನಲೂರು-ಮದುರೈ ಎಕ್ಸ್‌ಪ್ರೆಸ್‌ನಲ್ಲಿ ಗ್ಯಾಸ್ ಸಿಲಿಂಡರ್ ಅಕ್ರಮ ಸಾಗಣೆ: ಬೋಗಿಯಲ್ಲಿ ಹೊತ್ತಿಕೊಂಡ ಬೆಂಕಿ; ಕನಿಷ್ಠ ಎಂಟು ಸಾವು

ಚೆನ್ನೈ: ಇಂದು ಬೆಳಗ್ಗೆ 5:15 ಕ್ಕೆ ಪುನಲೂರು-ಮದುರೈ ಎಕ್ಸ್‌ಪ್ರೆಸ್‌ನ ಖಾಸಗಿ/ವೈಯಕ್ತಿಕ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆ ನಡೆದಾಗ ರೈಲು ಮದುರೈ ಯಾರ್ಡ್‌ನಲ್ಲಿತ್ತು. ಆ ಕೂಡಲೇ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದ್ದು, ಮತ್ತೊಂದು ಬೋಗಿಗೆ ಯಾವುದೇ ಹಾನಿಯಾಗದಂತೆ ತಡೆದಿದ್ದಾರೆ. ಪ್ರಯಾಣಿಕರು ಗ್ಯಾಸ್ ಸಿಲಿಂಡರ್ ಅನ್ನು ಕಳ್ಳಸಾಗಣೆ ಮಾಡುತ್ತಿದ್ದುದೇ ಬೆಂಕಿಗೆ ಕಾರಣ ಎಂದು ದಕ್ಷಿಣ ರೈಲ್ವೆ ಅಧಿಕಾರಿ ತಿಳಿಸಿದ್ದಾರೆ. ಘಟನೆಯಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದರು ಮತ್ತು ಏಳು ಮಂದಿ ಗಾಯಗೊಂಡಿರುವುದಾಗಿ ಮಾಧ್ಯಮ ವರದಿಯಾಗಿದೆ. #WATCH | Tamil […]