ಇದು ಮಾತ್ರೆ ಕಾಗದ ಅಲ್ಲ ಮದುವೆ ಆಮಂತ್ರಣ: ತಮಿಳುನಾಡಿನ ಔಷಧಿಕಾರ ಜೋಡಿಯ ವಿನೂತನ ಮದುವೆ ಪತ್ರಿಕೆ

ಚೆನ್ನೈ: ತಮಿಳುನಾಡಿನ ಔಷಧಿಕಾರ ಜೋಡಿಯೊಂದು ವಿಶಿಷ್ಟವಾದ ಮದುವೆಯ ಆಮಂತ್ರಣ ಪತ್ರವನ್ನು ಮುದ್ರಣ ಮಾಡಿದ್ದಾರೆ. ತಮ್ಮ ಸೃಜನಾತ್ಮಕ ಚಿಂತನೆಯನ್ನು ಓರೆಗೆ ಹಚ್ಚಿರುವ ತಿರುವಣ್ಣಾಮಲೈ ದಂಪತಿಗಳು ಥೇಟ್ ಮಾತ್ರೆ ಕಾಗದದ ಹಿಂಭಾಗದಂತೆಯೇ ಕಾಣುವ ತಮ್ಮ ಮದುವೆ ಆಹ್ವಾನ ಪತ್ರವನ್ನು ವಿನ್ಯಾಸಗೊಳಿಸಿ ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ಟ್ವಿಟರ್ ಬಳಕೆದಾರರಾದ ಹರ್ಷ್ ಗೋಯೆಂಕಾ ಅವರು ಹಂಚಿಕೊಂಡಿರುವ ಆಹ್ವಾನ ಪತ್ರಿಕೆಯು ‘ಎಜಿಲರಸನ್ ಮತ್ತು ವಸಂತಕುಮಾರಿ ವಿವಾಹ’ ಎಂಬ ದಪ್ಪ ಅಕ್ಷರಗಳನ್ನು ತೋರಿಸುತ್ತದೆ. ಫಕ್ಕನೆ ನೋಡಿದರೆ ಇದೊಂದು ಮಾತ್ರೆ ಕಾಗದವೋ ಎನ್ನುವ ಭಾವನೆ ಬರುತ್ತದೆ. ‘ಎಲ್ಲಾ ಸ್ನೇಹಿತರು […]