ಉಡುಪಿ:ಸಿಂಡಿಕೇಟ್‌ ಸರ್ಕಲ್‌–ಇಂದ್ರಾಳಿ ರಸ್ತೆಗೆ ಯು-ಟರ್ನ್ ನೀಡುವಂತೆ ಆಗ್ರಹ

ಉಡುಪಿ: ರಾಷ್ಟ್ರೀಯ ಹೆದ್ದಾರಿ 169 (ಎ)ರ ಮಣಿಪಾಲ ಸಿಂಡಿಕೇಟ್‌ ಸರ್ಕಲ್‌–ಇಂದ್ರಾಳಿ ಮಧ್ಯೆ ಬರುವ ಲಕ್ಷ್ಮೀಂದ್ರ ನಗರ ಹಾಗೂ ವಿಭುದಪ್ರಿಯ ನಗರದಲ್ಲಿ ಯು ಟರ್ನ್‌ ನೀಡುವಂತೆ ಆಗ್ರಹಿಸಿ ಲಕ್ಷ್ಮೀಂದ್ರ ನಗರ ನಾಗರಿಕ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು. ಹೆದ್ದಾರಿಯ ಮಣಿಪಾಲ ಸಿಂಡಿಕೇಟ್‌ ಸರ್ಕಲ್‌ನಿಂದ ಇಂದ್ರಾಳಿಯವರೆಗೆ ಮೂರು ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಯು ಟರ್ನ್‌ ನೀಡಿಲ್ಲ. ಇದರಿಂದ ಅರ್ಧ ಕಿ.ಮೀ ದೂರದ ಊರುಗಳನ್ನು ತಲುಪಬೇಕಾದರೆ ಸುಮಾರು ಮೂರು ಕಿ.ಮೀ.ಕ್ಕಿಂತಲೂ ಅಧಿಕ ಹಾದಿಯನ್ನು ಕ್ರಮಿಸಬೇಕಾದ […]