ಮದ್ಯಪ್ರಿಯರಿಗೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ: ಯುಕೆಯಿಂದ ಬರಲಿದೆ ಸ್ಕ್ವಾಚ್ ವಿಸ್ಕಿ!
ನವದೆಹಲಿ: ಇಷ್ಟು ದಿನ ಅಬಕಾರಿ ಸುಂಕವನ್ನು ಹೆಚ್ಚಿಸಿ ಮದ್ಯಪ್ರಿಯರಿಗೆ ಶಾಕ್ ನೀಡುತ್ತಿದ್ದ ಕೇಂದ್ರ ಸರ್ಕಾರವು, ಇದೀಗ ಸಿಹಿ ಸುದ್ದಿಯೊಂದನ್ನು ನೀಡಲು ಮುಂದಾಗಿದೆ. ಯುಕೆಯಿಂದ ಸ್ಕ್ವಾಚ್ ವಿಸ್ಕಿಯನ್ನು ದೊಡ್ಡ ಪ್ರಮಾಣದಲ್ಲಿ ಭಾರತಕ್ಕೆ ಆಮದು ಮಾಡಿಕೊಳ್ಳಲು ಚಿಂತನೆ ನಡೆಸಿದೆ. ಮಂಗಳವಾರ ನಡೆದ ಸಿಐಐನ ಭಾರತ-ಯುಕೆ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಈ ಬಗ್ಗೆ ಮಾಹಿತಿ ನೀಡಿದರು. ‘ನಾನು ಸ್ಕ್ವಾಚ್ ವಿಸ್ಕಿಯನ್ನು ಕುಡಿಯುವುದಿಲ್ಲ. ಆದರೆ ಸ್ಕ್ವಾಚ್ ವಿಸ್ಕಿಯ ಹೆಸರಿನಲ್ಲಿ ಭಾರತದಲ್ಲಿ ಮಾರಾಟ ಆಗುತ್ತಿರುವ […]