ಮತದಾನದ ಮಹತ್ವ ಸಾರಿದ ಯಕ್ಷಗಾನ

ಉಡುಪಿ: ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ಮಹತ್ವವನ್ನು ಸಾರುವ ಯಕ್ಷಗಾನ ಹಾಗೂ ಚಿತ್ರಕಲಾ ಪ್ರದರ್ಶನ ಗುರುವಾರ ಉಡುಪಿ ನಿರ್ಮಿತಿ ಕೇಂದ್ರದ ಆವರಣದಲ್ಲಿ ನಡೆಯಿತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪದ್ಧತಿಯಿಂದ ಪ್ರಜಾಡಳಿತ ಜಾರಿಗೆ ಬಂದು, ಜನಪ್ರತಿನಿಧಿಗಳ ಪಾತ್ರ ಹಾಗೂ ಅವರ ಆಯ್ಕೆಯಲ್ಲಿ ಮತದಾರರು ವಹಿಸಬೇಕಾದ ಜಾಗರೂಕತೆ, ಹಣ ಆಮಿಷಕ್ಕೊಳಗಾಗಿ ಮತದಾನ ಮಾಡುವುದರ ಕೆಡುಕುಗಳು, ಚುನಾವಣೆ ಪ್ರಕ್ರಿಯೆಯಲ್ಲಿ ಜನಸಮಾನ್ಯರ ಪಾತ್ರ ಮತ್ತಿತರ ವಿಷಯಗಳ ಬಗ್ಗೆ ಕೋಟ ಕಲಾಪೀಠ ತಂಡದವರು ಯಕ್ಷಗಾನದ ಮೂಲಕ […]
ಮತದಾರರ ಸಹಾಯವಾಣಿ 1950 ದ ನೆರವು ಪಡೆಯಿರಿ

ಮನೆಯಲ್ಲಿ ಅಂಗವಿಕಲರು, ಹಿರಿಯ ನಾಗರೀಕರು ಇದ್ದಾರೆಯೇ, ಅವರನ್ನು ಮತಕೇಂದ್ರಕ್ಕೆ ಕರೆದುಕೊಂಡು ಹೋಗಿ ಮತದಾನ ಮಾಡಿಸಲು ತೊಂದರೆಯಿದೆಯೇ , ಚಿಂತೆ ಬಿಡಿ.. ಉಡುಪಿ ಜಿಲ್ಲಾ ಮತದಾರರ ಸಹಾಯವಾಣಿ ಕೇಂದ್ರ 1950 ಗೆ ಮಾಹಿತಿ ನೀಡಿ.. ಹೌದು.. ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಪ್ರಯುಕ್ತ ಜಿಲ್ಲೆಯ ಎಲ್ಲಾ ಮತದಾರರು ಮತದಾನ ಮಾಡಲು ಅನುಕೂಲವಾಗುವಂತೆ ಜಿಲ್ಲಾಡಳಿತದವತಿಯಿಂದ ಪ್ರಾರಂಭಿಸಲಾಗಿರುವ ಮತದಾರರ ಸಹಾಯವಾಣಿ ಕೇಂದ್ರದ ಮೂಲಕ, ಸುಗಮ ಚುನಾವಣೆ ಮತ್ತು ಎಲ್ಲರೂ ಮತದಾನದಲ್ಲಿ ಭಾಗವಹಿಸಲು ಅಗತ್ಯವಿರುವ ನೆರವು ನೀಡಲಾಗುತ್ತಿದೆ. ಮತದಾರರ ಸಹಾಯವಾಣಿ ಸಂಖ್ಯೆ 1950 […]