ನ್ಯಾಯಾಂಗ ನಿಂದನೆ ಪ್ರಕರಣ: ಪ್ರಶಾಂತ್ ಭೂಷನ್ ಗೆ ಒಂದು ರೂಪಾಯಿ ದಂಡ ವಿಧಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ಪ್ರಶಾಂತ್ ಭೂಷನ್ ಗೆ ಸುಪ್ರೀಂ ಕೋರ್ಟ್ 1 ರೂ. ದಂಡ ಪಾವತಿಸುವಂತೆ ಶಿಕ್ಷೆ ವಿಧಿಸಿದೆ. ಸೆಪ್ಟಂಬರ್ 15ರೊಳಗೆ 1 ರೂ. ದಂಡವನ್ನು ಪಾವತಿಸಬೇಕು. ವಿಫಲರಾದರೆ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಹಾಗೂ 3 ವರ್ಷಗಳ ಕಾಲ ವಕೀಲಿ ವೃತ್ತಿ ನಡೆಸಬಾರದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.