ಬಿಸಿಲಿನ ಧಗೆಯಿಂದ ತನುವನ್ನು ತಂಪಾಗಿಸಿಕೊಳ್ಳಲು ನೈಸರ್ಗಿಕ ಆರೋಗ್ಯಕರ ಪೇಯಗಳನ್ನು ಸೇವಿಸಿರಿ

ಕರಾವಳಿಯ ಭಾಗದಲ್ಲಿ ಬಿಸಿಲು ಧಗಧಗಿಸುತ್ತಿದ್ದು, ಮಂಗಳೂರಿನಲ್ಲಿ 39ಡಿಗ್ರಿ ಸೆಲ್ಸಿಯಸ್ ನ ಅತ್ಯಾಧಿಕ ತಾಪಮಾನ ದಾಖಲಾಗಿದೆ. ಬಿಸಿಲಿನ ತಾಪಾಘಾತದಿಂದ ಜನರು ಮಾತ್ರವಲ್ಲದೆ ಪ್ರಾಣಿ ಪಕ್ಷಿಗಳು ಕೂಡಾ ಪ್ರಾಣಕಳೆದುಕೊಳ್ಳುವ ಘಟನೆಗಳು ಭಾರತದಲ್ಲಿ ಸರ್ವೇ ಸಾಮಾನ್ಯ. ಬೇಸಿಗೆ ಕಾಲದಲ್ಲಿ ದೇಹವು ಅತಿ ಹೆಚ್ಚು ನೀರನ್ನು ಕಳೆದುಕೊಳ್ಳುವುದರಿಂದ ಈ ಸಮಯದಲ್ಲಿ ನೀರಿನ ಸೇವನೆಯನ್ನು ಹೆಚ್ಚಿಸುವುದು ಅವಶ್ಯ. ಬರಿಯ ನೀರು ಕುಡಿಯುವ ಬದಲಿಗೆ ಕೆಲವೊಂದು ಆರೋಗ್ಯ ಪೇಯಗಳನ್ನು ಆಹಾರದ ಜೊತೆ ಸೇವಿಸಿದಲ್ಲಿ ತನುವನ್ನು ತಂಪಾಗಿಸುವ ಜೊತೆ ಮನಸ್ಸನ್ನೂ ಉಲ್ಲಾಸಭರಿತವಾಗಿಸಿಕೊಳ್ಳಬಹುದು. ನೀರು ಮಜ್ಜಿಗೆ: ಮಜ್ಜಿಗೆಯ ನಿಯಮಿತ […]

ಆಟೋ ರಿಕ್ಷಾ ಛಾವಣಿ ಮೇಲೆ ಚಲಿಸುವ ಉದ್ಯಾನ!! ದೆಹಲಿ ರಿಕ್ಷಾವಾಲನ ವಿನೂತನ ಪ್ರಯೋಗ!

ದೆಹಲಿ: ಭಾರತದ ರಾಜಧಾನಿಯಲ್ಲಿ ಆಟೋರಿಕ್ಷಾ ಚಾಲಕರಾಗಿರುವ ಮಹೇಂದ್ರ ಕುಮಾರ್ ಎಂಬುವರು ತಮ್ಮ ಪ್ರಯಾಣಿಕರನ್ನು ತಂಪಾಗಿರಿಸಲು ವಿಶಿಷ್ಟ ವಿಧಾನ ಒಂದನ್ನು ಅಳವಡಿಸಿಕೊಂಡಿದ್ದಾರೆ. ದೆಹಲಿಯ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ತಲುಪಿದರೂ ಇವರ ಆಟೋದೊಳಗಡೆ ಕುಳಿತು ಪ್ರಯಾಣ ಮಾಡುವ ಪ್ರಯಾಣಿಕರ ತಲೆ ತಂಪಾಗಿರುತ್ತದೆ. ತಮ್ಮ ಆಟೋದ ಛಾವಣಿಯ ಮೇಲೆ ಹಚ್ಚ ಹಸಿರಿನ ಉದ್ಯಾನವೊಂದನ್ನು ಬೆಳೆಸಿರುವ ಕುಮಾರ್, ಬೇಸಿಗೆಯ ಬಿರು ಬಿಸಿಲಿನಲ್ಲೂ ಪ್ರಯಾಣಿಕರಿಗೆ ತಂಪನ್ನುಣಿಸುತ್ತಿದ್ದಾರೆ. 48 ವರ್ಷ ವಯಸ್ಸಿನ ಕುಮಾರ್ ಅವರ ಈ ‘ಚಲಿಸುವ ಉದ್ಯಾನ’ವು ಗ್ರಾಹಕರ ಮನಸೂರೆಗೊಳ್ಳುತ್ತಿದೆ. ಇವರ ರಿಕ್ಷಾದಲ್ಲಿ […]