ಕಳತ್ತೂರು: ಮನೆ ತೊರೆದ ಹೆಂಡತಿ; ಖಿನ್ನನಾದ ಪತಿ‌ ನೇಣಿಗೆ ಶರಣು

ಕಳತ್ತೂರು: ಹೆಂಡತಿ ಮನೆ ಬಿಟ್ಟು ಹೋದ ಕೊರಗಿನಿಂದ ಖಿನ್ನನಾದ ಪತಿ‌ ನೇಣಿಗೆ ಶರಣಾದ ಘಟನೆ ಕಾಪು ತಾಲೂಕಿನ ಕಳತ್ತೂರಿನ‌ಲ್ಲಿ ಮೇ.16 ರಂದು ನಡೆದಿದೆ. ಕಳತ್ತೂರಿನ‌ ನಿವಾಸಿ 38 ವರ್ಷದ ಸುನೀಲ್ ದೇವಪ್ರಸಾದ ಸೋನ್ಸ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ವಿಪರೀತ ಶರಾಬು ಕುಡಿಯುವ ಚಟ ಹೊಂದಿದ್ದು, ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು. ಈ ಕಾರಣಕ್ಕಾಗಿ ಹೆಂಡತಿ ಪತಿಯನ್ನು ತೊರೆದು ಮನೆ ಬಿಟ್ಟು ಹೋಗಿದ್ದರು. ಈ ಕೊರಗಿನಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಸುನೀಲ್, ಮೇ.16 ರಂದು ಮಧ್ಯಾಹ್ನ ಮನೆಯ ಮಾಡಿನ ಜಂತಿಗೆ ಶಾಲು […]

ಒಬ್ಬಂಟಿತನದಿಂದ ಮನನೊಂದು ವೃದ್ಧ ಆತ್ಮಹತ್ಯೆ

ಮಿಯಾರು: ಮಾನಸಿಕ ಕಾಯಿಲೆ ಹಾಗೂ ಒಬ್ಬಂಟಿತನದಿಂದ ಮನನೊಂದು ವೃದ್ಧರೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಮಿಯಾರು ಗ್ರಾಮದ ಅರ್ಪದೆ ಎಂಬಲ್ಲಿ ಮೇ.8 ರಂದು ಸಂಜೆ ನಡೆದಿದೆ. ಮಿಯಾರು ಗ್ರಾಮದ ಅರ್ಪದೆ ನಿವಾಸಿ 77 ವರ್ಷದ ಜೇಮ್ಸ್ ಗೋರಿಯಸ್‌ ಆತ್ಮಹತ್ಯೆ ಮಾಡಿಕೊಂಡ ವೃದ್ಧ. ಜೇಮ್ಸ್ ಅವರು ಒಬ್ಬರೇ ವಾಸವಾಗಿದ್ದು, ಹೆಂಡತಿ ಮತ್ತು ಮಗಳು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಒಬ್ಬಂಟಿತನದಿಂದ ಮನನೊಂದ ಜೇಮ್ಸ್ ಅವರು, ಮೇ.8 ರಂದು ಸಂಜೆ ಮನೆಯ ಹಿಂದುಗಡೆ ಇರುವ ಶೆಡ್ಡಿಗೆ ಅಳವಡಿಸಿದ ಕಬ್ಬಿಣದ ಜಂತಿಗೆ […]

ಅಸ್ಥಿಪಂಜರವಾಗಿ ಪತ್ತೆಯಾದ 9 ತಿಂಗಳ ಹಿಂದೆ ನಾಪತ್ತೆಯಾದವ! ಸಾವಿನ ಸುತ್ತ ಸಂಶಯದ ಹುತ್ತ?

ಪೆರ್ಡೂರು: 9 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಪೆರ್ಡೂರು ಗ್ರಾಮದ ಪಕ್ಕಾಲು ಜಯಲಕ್ಷ್ಮೀ ಮನೆ ನಿವಾಸಿ 30 ವರ್ಷದ ನಾಗರಾಜ ಆಚಾರ್ಯ ಎಂಬವರ ಮೃತದೇಹವು ಅಸ್ಥಿಪಂಜರದ ಸ್ಥಿತಿಯಲ್ಲಿ‌ ಮನೆಯ ಸಮೀಪದ ಚೌಂಡಿ ನಗರದ ಕೇಶವ ಹೆಗ್ಡೆ ಅವರ ಹಾಡಿಯಲ್ಲಿ ಮೇ.7ರಂದು ಸಂಜೆ ಪತ್ತೆಯಾಗಿದೆ. ನಾಗರಾಜ ಆಚಾರ್ಯ 2021ರ ಆಗಸ್ಟ್ 11ರ ಬೆಳಿಗ್ಗೆ 8.30ರಿಂದ ಮನೆಯಿಂದ ಕಾಣೆಯಾಗಿದ್ದರು. ಮನೆಯವರು ಸಾಕಷ್ಟು ಹುಡುಕಾಡಿದರೂ ನಾಗರಾಜ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಹಿರಿಯಡಕ ಠಾಣೆಯಲ್ಲಿ ನಾಪತ್ತೆ ಪ್ರಕರಣ ಕೂಡ ದಾಖಲಾಗಿತ್ತು. ನಿನ್ನೆ ಸಂಜೆ ಮೃತನ ಸಹೋದರ […]

ಉಡುಪಿ ಹೆಡ್ ಕಾನ್ ಸ್ಟೇಬಲ್ ಆತ್ಮಹತ್ಯೆ ಪ್ರಕರಣ: ಎರಡು ಆಡಿಯೋ ಕ್ಲಿಪ್ ಬಹಿರಂಗ

ಉಡುಪಿ: ಎಸ್.ಎಸ್.ಎಲ್.ಸಿ ಪ್ರಶ್ನೆ ಪತ್ರಿಕೆ ಕೋಣೆಯ ಭದ್ರತಾ ಕರ್ತವ್ಯದಲ್ಲಿ ನಿರತರಾಗಿದ್ದಾಗಲೇ ತನ್ನ ಸೇವಾ ರೈಫಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಹೆಡ್ ಕಾನ್ ಸ್ಟೇಬಲ್ ರಾಜೇಶ್ ಕುಂದರ್ ಅವರ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ರಾಜೇಶ್ ಕುಂದರ್ ತಮ್ಮ ಸಹೋದ್ಯೋಗಿಗಳ ಕಿರುಕುಳದ ವಿರುದ್ದ ದೂರು ನೀಡಿದ್ದಾರೆನ್ನಲಾಗುವ ಆಡಿಯೋ ಕ್ಲಿಪ್ ಗಳು ಪೋಲೀಸರ ವಶವಾಗಿದೆ. ಮೊದಲನೆ ಆಡಿಯೋದಲ್ಲಿ ಹಿಜಾಬ್ ಗಲಾಟೆ ಸಂದರ್ಭ ಗಂಗೊಳ್ಳಿ ಠಾಣೆಗೆ ಕ್ಷಿಪ್ರ ದಾಳಿ ಪಡೆ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ರಾಜೇಶ್ ಕೈಕೆಳಗೆ ಇಬ್ಬರು ಸಿಬ್ಬಂದಿ […]

ಗಂಡ ಹೆಂಡತಿ ಜಗಳ ಸಾವಿನಲ್ಲಿ‌ ಅಂತ್ಯ

ಕುಕ್ಕುಂದೂರು: ಗಂಡ ಹೆಂಡತಿಯ ಜಗಳವು ಹೆಂಡತಿಯ ಸಾವಿನಲ್ಲಿ ಅಂತ್ಯ ಕಂಡ ದಾರುಣ ಘಟನೆ ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಎಂಬಲ್ಲಿ ಮೇ 3 ರಂದು ಬೆಳಿಗ್ಗೆ ನಡೆದಿದೆ. ಮೃತರನ್ನು ಜೋಡುರಸ್ತೆಯ 28 ವರ್ಷದ ಶೋಭಾ ಎಂದು ಗುರುತಿಸಲಾಗಿದೆ. ಇವರ ಪತಿ ಲೋಕೇಶ್ ಎಂಬವರು ನಿನ್ನೆ ಬೆಳಿಗ್ಗೆ ಮದ್ಯಪಾನ ಮಾಡಿಕೊಂಡು ಬಂದು ಶೋಭಾ ಅವರ ಬಳಿ ಜಗಳವಾಡಿದ್ದರು. ಇದರಿಂದ ಮನನೊಂದ ಶೋಭಾ ಮನೆಯ ಕೋಣೆಗೆ ತೆರಳಿ ಚಿಲಕ ಹಾಕಿಕೊಂಡು ಮಾಡಿನ ಶೀಟಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ […]