ಪರ್ಯಾಯ ಪುತ್ತಿಗೆ ಮಠದ ಬಾಳೆ ಮುಹೂರ್ತ ಕಾರ್ಯಕ್ರಮ ಸಂಪನ್ನ
ಉಡುಪಿ: ಭಾವಿ ಪರ್ಯಾಯ ಪುತ್ತಿಗೆ ಮಠದ ಪರ್ಯಾಯ ಪೂರ್ವ ಮುಹೂರ್ತಗಳಲ್ಲಿ ಮೊದಲನೆಯ ಕಾರ್ಯಕ್ರಮ ಬಾಳೆ ಮುಹೂರ್ತ ಶುಕ್ರವಾರ ಬೆಳಿಗ್ಗೆ 8.20ರ ಧನುರ್ನಗ್ನದಲ್ಲಿ ನಡೆಯಿತು. 2024ರ ಜ. 18ರಂದು ಸರ್ವಜ್ಞ ಪೀಠವೇರಿ ಚತುರ್ಥ ಬಾರಿಗೆ ದ್ವೈವಾರ್ಷಿಕ ಶ್ರೀಕೃಷ್ಣ ಪೂಜಾ ಕೈಂಕರ್ಯ ಸ್ವೀಕರಿಸಲಿರುವ ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪುತ್ತಿಗೆ ಮಠದ ನಿಗದಿತ ಸ್ಥಳದಲ್ಲಿ ಬಾಳೆ ಮತ್ತು ತುಳಸಿ ಸಸಿಗಳನ್ನು ನೆಡುವ ಮೂಲಕ ಸಾಂಪ್ರದಾಯಿಕ ಬಾಳೆ ಮುಹೂರ್ತಕ್ಕೆ ಚಾಲನೆ ನೀಡಲಾಯಿತು. ಹೆರ್ಗ ವೇದವ್ಯಾಸ ಭಟ್, ಕೇಂಜ […]