ಕಬ್ಬಿನ FRP ಕ್ವಿಂಟಲ್‌ಗೆ 315 ರಿಂದ 340 ಹೆಚ್ಚಿಸಿದ ಕೇಂದ್ರ ಸರ್ಕಾರ: 5 ಕೋಟಿಗೂ ಹೆಚ್ಚು ಕಬ್ಬು ಬೆಳೆಗಾರರಿಗೆ ಪ್ರಯೋಜನ

ನವದೆಹಲಿ: ಫೆಬ್ರವರಿ 21 ರಂದು ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು 2024-25 (ಅಕ್ಟೋಬರ್-ಸೆಪ್ಟೆಂಬರ್) ಹಂಗಾಮಿಗೆ ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು (ಎಫ್‌ಆರ್‌ಪಿ) ಕ್ವಿಂಟಲ್‌ಗೆ 315 ರಿಂದ 340 ರೂ.ಗೆ ಹೆಚ್ಚಿಸಲು ಅನುಮೋದಿಸಿತು. ಕಬ್ಬಿನ ಎಫ್‌ಆರ್‌ಪಿಯಲ್ಲಿ ಪ್ರತಿ ಕ್ವಿಂಟಲ್‌ಗೆ ರೂ 25 ಹೆಚ್ಚಳವು ಕಳೆದ ವರ್ಷ ಘೋಷಿಸಿದ್ದಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ವಿಶ್ವದಲ್ಲಿಯೇ ಕಬ್ಬಿಗೆ ಭಾರತ ಅತಿ ಹೆಚ್ಚು ಬೆಲೆ ನೀಡುತ್ತಿದೆ. ಈ ವರ್ಷವೂ ಮೋದಿ ಸರಕಾರ ಶೇ.8ರಷ್ಟು ಹೆಚ್ಚಳ ಮಾಡುವುದಾಗಿ ಘೋಷಿಸಿದೆ. ಇದು ರೈತರ ಹಿತಾಸಕ್ತಿಯಾಗಿದೆ ಎಂದು […]