ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ: 7 ಮಂದಿ ಗೈರು

ಉಡುಪಿ, ಜೂನ್ 14: ಜಿಲ್ಲೆಯಲ್ಲಿ ಶುಕ್ರವಾರ ನಡೆದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ 27 ಮಂದಿ ಪರೀಕ್ಷೆ ಬರೆದಿದ್ದು, 7 ಮಂದಿ ಗೈರಾಗಿದ್ದಾರೆ. ಎಲೆಕ್ಟ್ರಾನಿಕ್ಸ್ ಪರೀಕ್ಷೆಗೆ ನೊಂದಾಯಿಸಿದ್ದ 4 ಮಂದಿ ವಿದ್ಯಾರ್ಥಿಗಳಲ್ಲಿ 3 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಒಬ್ಬರು ಗೈರು ಹಾಜರಾಗಿದ್ದಾರೆ. ಕಂಪ್ಯೂಟರ್ ಸೈನ್ಸ್ ಪರೀಕ್ಷೆಗೆ 30 ಮಂದಿ ಹೆಸರು ನೊಂದಾಯಿಸಿದ್ದು, 24 ಮಂದಿ ಪರೀಕ್ಷೆ ಬರೆದಿದ್ದು, 6 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

ಜುಲೈ 12 ರಿಂದ ಮುಕ್ತ ವಿಶ್ವ ವಿದ್ಯಾಲಯ ಪರೀಕ್ಷೆ

ಉಡುಪಿ, ಜೂನ್ 14: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರ ಉಡುಪಿ ಮತ್ತು ಮಂಗಳೂರಿನಲ್ಲಿ 2018-19ನೇ ಸಾಲಿನಲ್ಲಿ ಪ್ರವೇಶಾತಿ ಹೊಂದಿರುವ ಪ್ರಥಮ ಬಿ.ಎ/ಬಿ.ಕಾಂ/ಬಿ.ಲಿಬ್.ಐ.ಎಸ್ಸಿ/ಎಂ.ಕಾಂ/ಎಂ.ಲಿಬ್.ಐಎಸ್ಸಿ ಮತ್ತು ಎಂಸ್ಸಿ(ಪ್ರಥಮ ಸಿಮಿಸ್ಟರ್) ವಿದ್ಯಾರ್ಥಿಗಳಿಗೆ ಮತ್ತು 2011-12 ಮತ್ತು 2012-13ರಲ್ಲಿ ಬಿ.ಎ/ಬಿ.ಕಾಂ ಗೆ ಪ್ರವೇಶಾತಿ ಹೊಂದಿ ಅನುತೀರ್ಣಗೊಂಡಿರುವ ಅಥವಾ ಪರೀಕ್ಷೆಯನ್ನು ತೆಗೆದುಕೊಂಡಿಲ್ಲದ ವಿದ್ಯಾರ್ಥಿಗಳಿಗೆ ಜುಲ್ಯೆ 12 ರಿಂದ ಕರಾಮುವಿಯ ಪರೀಕ್ಷೆಗಳು ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ನಡೆಯುತ್ತವೆ. ವಿದ್ಯಾರ್ಥಿಗಳು ಆನ್‍ಲ್ಯೆನ್ ಮತ್ತು ಆಪ್‍ಲ್ಯೆನ್ ಎರಡು ವಿಧದಲ್ಲೂ ಪರಿಕ್ಷೆಯನ್ನು ಕಟ್ಟಬಹುದಾಗಿದೆ. ಪರೀಕ್ಷೆ ಬಗೆಗಿನ ಮಾಹಿತಿಗಾಗಿ ಕರಾಮುವಿ […]

ವಿದ್ಯಾರ್ಥಿ ಪಾಸುಗಳ ಮಾನ್ಯತಾ ಅವಧಿ ಜೂ. 30 ರವರೆಗೆ ವಿಸ್ತರಣೆ

ಉಡುಪಿ, ಜೂನ್ 11: 2019-20 ನೇ ಶೈಕ್ಷಣಿಕ ವರ್ಷದಲ್ಲಿ ತರಗತಿಗಳು ಪ್ರಾರಂಭವಾಗಿರುವುದರಿಂದ, ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಅನುಕೂಲವಾಗುವಂತೆ, ಶಾಲೆ ಹಾಗೂ ಪಿಯುಸಿ ವಿದ್ಯಾರ್ಥಿಗಳು, 2018-19 ನೇ ಸಾಲಿನಲ್ಲಿ ವಿತರಣೆಯಾಗಿರುವ ವಿದ್ಯಾರ್ಥಿ ಪಾಸುಗಳನ್ನು ತೋರಿಸಿ, ಜೂನ್ 30 ರವರೆಗೆ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು 2018-19 ನೇ ಸಾಲಿನ ವಿದ್ಯಾರ್ಥಿ ಪಾಸಿನ ಜೊತೆಗೆ ಪ್ರಸಕ್ತ ಸಾಲಿನ ಭೋಧನಾ ಶುಲ್ಕ ರಸೀದಿ ಅಥವಾ ಶಾಲಾ/ಕಾಲೇಜಿನ ಗುರುತಿನ ಚೀಟಿಯನ್ನು ತೋರಿಸಿ ಪಾಸಿನಲ್ಲಿ ನಮೂದಿಸಿರುವ ಮಾರ್ಗದಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿರುತ್ತದೆ. ಶಾಲಾ […]

ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಬಹುಮಾನ ಹಣ ಮಂಜೂರು

ಉಡುಪಿ, ಮೇ 27: 2019-20 ರಲ್ಲಿ ನಡೆದ ದ್ವಿತೀಯ ಪಿಯುಸಿ, 3 ವರ್ಷದ ಪಾಲಿಟೆಕ್ನಿಕ್ ಡಿಪ್ಲೋಮಾ, ಪದವಿ, ಬಿಎಡ್, ಬಿಪಿಎಡ್, ಸ್ನಾತ್ತಕೋತ್ತರ ಪದವಿ, ಎಂಎಡ್, ಎಂಪಿಎಡ್, ಕೃಷಿ, ಪಶುಸಂಗೋಪನೆ, ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕೋರ್ಸುಗಳಿಗೆ ಸಂಬಂಧಿಸಿದಂತೆ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬಹುಮಾನ ಹಣವನ್ನು ಮಂಜೂರು ಮಾಡುವ ಸಲುವಾಗಿ ಅರ್ಹ ವಿದ್ಯಾರ್ಥಿಗಳಿಂದ ಇಲಾಖೆಯ ವೆಬ್‍ಸೈಟ್ www.sw.kar.nic.in ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು […]

ಎಸ್‍ಎಸ್‍ಎಲ್‍ಸಿ ತೇರ್ಗಡೆಯಾದ ಪ.ಜಾತಿ/ ಪ.ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಆನ್‍ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭ

ಉಡುಪಿ, ಮೇ 21: 2018 -19 ನೇ ಸಾಲಿಗೆ ಎಸ್‍ಎಸ್‍ಎಲ್‍ಸಿಯಲ್ಲಿ ಪ್ರಥಮ ಬಾರಿಗೆ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮಂಜೂರು ಮಾಡಲು ಆನ್‍ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. SC ವಿದ್ಯಾರ್ಥಿಗಳು ದಾಖಲೆಗಳೊಂದಿಗೆ www.sw.kar.nic.in SSLC prize money, ಹಾಗೂ ST ವಿದ್ಯಾರ್ಥಿಗಳು www.tw.kar.nic.in SSLC prize money ಸ್ಕೀಮ್‍ನಲ್ಲಿ ಸಂಪೂರ್ಣ ಮಾಹಿತಿಯನ್ನು (ಎಸ್‍ಎಸ್‍ಎಲ್‍ಸಿ ಅಂಕ ಪಟ್ಟಿ, ಆಧಾರ್‍ಕಾರ್ಡ್, ಬ್ಯಾಂಕ್ ಖಾತೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ) ನೀಡಿ ಕಡ್ಡಾಯವಾಗಿ ಆನ್ ಲೈನ್‍ನಲ್ಲಿ […]