ವಿದ್ಯಾರ್ಥಿಗಳ ಕನಸುಗಳನ್ನು ಹೆಮ್ಮರವಾಗಿಸುವ ಹೇರಾಡಿ ಬಾರ್ಕೂರು ನೇಶನಲ್ ಐಟಿಐ ತಾಂತ್ರಿಕ ಶಿಕ್ಷಣ ಸಂಸ್ಥೆ

ಉಡುಪಿ: ದಿ ಬಾರ್ಕೂರು ಎಜ್ಯುಕೇಶನಲ್ ಸೊಸೈಟಿಯ ಆಡಳಿತಕ್ಕೊಳಪಟ್ಟ ನೇಶನಲ್ ಐಟಿಐ ಯು ಉಡುಪಿ ಜಿಲ್ಲೆಯ ಪ್ರಥಮ ಐಟಿಐ ಎಂಬ ಗರಿಮೆಯೊಂದಿಗೆ 1/8/1984 ರಲ್ಲಿ ಪ್ರಾರಂಭವಾಯಿತು. ಅಂದಿನ ಆಡಳಿತ ಮಂಡಳಿಯ ದೂರದರ್ಶಿತ್ವದಿಂದ ಊರ ಮಹನೀಯರ ಸಹಕಾರದೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಪ್ರಾರಂಭವಾಗಿರುವ ನಮ್ಮ ಸಂಸ್ಥೆ ಬೆಳೆದು ಹೆಮ್ಮರವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ನೀಡುವಲ್ಲಿ ಸಫಲತೆಯನ್ನು ಪಡೆದಿದೆ. ಸಂಸ್ಥೆಗೆ “ಗ್ರೇಡಿಂಗ್ ಮೆಥಡಾಲಜಿ”ಯಲ್ಲಿ ಉಡುಪಿ ಜಿಲ್ಲೆಯಲ್ಲೇ ಪ್ರಥಮ:ಭಾರತ ದೇಶದಲ್ಲಿನ ಐಟಿಐ ಕಾಲೇಜ್ ಗಳ ಫಲಿತಾಂಶ, ವಿದ್ಯಾರ್ಥಿಗಳ ದಾಖಲಾತಿ, ಶೈಕ್ಷಣಿಕ ಗುಣಮಟ್ಟ ಹಾಗೂ […]