ಎಲ್ಲಾದ್ರೂ ಈ ಹಣ್ಣು ಸಿಕ್ಕಿದ್ರೆ  ಮಿಸ್ ಮಾಡದೇ ತಿನ್ನಿ:ದೇಹಕ್ಕೆ ಈ ಹಣ್ಣು ಪವರ್ ಫುಲ್

ಮಾರುಕಟ್ಟೆಯಲ್ಲಿ ನೂರಾರು ವಿದೇಶಿ ಹಣ್ಣು ಈಗೀಗ ಲಗ್ಗೆ ಇಡುತ್ತಿದೆ. ಆದರೆ ನಾವು ನಮ್ಮ ಊರಿನಲ್ಲಿ ಬೆಳೆಯುವ, ಹತ್ತಾರು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿರುವ ಕೆಲವು  ಹಣ್ಣುಗಳನ್ನೇ ಮರೆತುಬಿಡುತ್ತಿದ್ದೇವೆ. ಅವುಗಳಲ್ಲಿ  ಸ್ಟಾರ್ ಫ್ರೂಟ್ (ಧಾರೆಹುಳಿ) ಹಣ್ಣು ಕೂಡ ಒಂದು. ಈ ಹಣ್ಣು ನಮ್ಮಲ್ಲಿ ಹೊಸ ಶಕ್ತಿ ಚೈತನ್ಯವನ್ನು ತುಂಬಿಸುವಷ್ಟು ಪವರ್ ಫುಲ್. ಇದು ಹುಳಿಮಿಶ್ರಿತ ಸಿಹಿ ಹಣ್ಣಾಗಿದ್ದು, ಅನೇಕ ಪೋಷಕಾಂಶಗಳ ಆಗರ ಈ ಹಣ್ಣು. ಬಾಲಿವುಡ್‌ನ ಅತ್ಯಂತ ಫಿಟೆಸ್ಟ್ ದಿವಾ ಶಿಲ್ಪಾ ಶೆಟ್ಟಿ ಕೂಡ ಇದರ ಪೌಷ್ಟಿಕಾಂಶದ ಶಕ್ತಿಯನ್ನು ಶ್ಲಾಘಿಸುತ್ತಾರೆ. […]