ಎಸೆಸೆಲ್ಸಿ ಪರೀಕ್ಷೆ: ಮಧುಮೇಹ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯ, ವಿನಾಯಿತಿ
ಉಡುಪಿ:ಮಧುಮೇಹದಿಂದ ಬಳಲುತ್ತಿರುವ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಹಾಜರಾಗುವ ಸಂದರ್ಭ ವಿಶೇಷ ಸೌಲಭ್ಯ, ವಿನಾಯಿತಿ ನೀಡಲಾಗಿದೆ. ಔಷಧ, ಲಘು ಉಪಾಹಾರ, ಕುಡಿಯುವ ನೀರು, ಬಿಸ್ಕತ್ತು, ಒಣ ಹಣ್ಣು, ಗ್ಲುಕೋಮೀಟರ್, ಗ್ಲುಕೋಸ್ ಪರೀಕ್ಷಾ ಪಟ್ಟಿಯನ್ನು ತರಲು ಅನುವು ಮಾಡಿಕೊಡಲಾಗುವುದು. ಪರೀಕ್ಷೆ ಮಧ್ಯದಲ್ಲಿ ಅಗತ್ಯವಿದ್ದಲ್ಲಿ ಔಷಧ ಸೇವೆ, ರಕ್ತದಲ್ಲಿನ ಸಕ್ಕರೆ ಪರೀಕ್ಷಿಸಲು 15 ನಿಮಿಷಗಳ ಹೆಚ್ಚಿನ ಸಮಯದ ಅವಕಾಶ ನೀಡುವ ಬಗ್ಗೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಕ್ರಮ ತೆಗೆದುಕೊಳ್ಳುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಪರೀಕ್ಷಾ ವಿಭಾಗದ […]