ದುಡಿಮೆಯೊಂದಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪೂರ್ಣಾಂಕ ಪಡೆದ ಪುನೀತ್ ಸಾಧನೆ ಶ್ಲಾಘನೀಯ: ಯಶ್ ಪಾಲ್ ಸುವರ್ಣ

ಮಲ್ಪೆ: ಮೀನುಗಾರಿಕಾ ಬಂದರಿನಲ್ಲಿ ಮುಂಜಾನೆ ಕೆಲಸಮಾಡಿ ಮಲ್ಪೆ ಸರಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಅಂಕಗಳಿಸಿದ ಪುನೀತ್ ಸಾಧನೆ ಶ್ಲಾಘನೀಯ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ಹೇಳಿದರು. ಮೀನು ಮಾರಾಟ ಫೆಡರೇಷನ್ ಹಂಗಾರಕಟ್ಟೆ ಶಾಖೆಯ ಬ್ಯಾಂಕಿಂಗ್ ವಿಭಾಗದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಪುನೀತ್ ನ ಮುಂದಿನ ವಿದ್ಯಾಭ್ಯಾಸಕ್ಕಾಗಿ ಫೆಡರೇಶನ್ ವತಿಯಿಂದ […]

ಕೊಡವೂರು: ಮನೆ- ಮನೆಗೆ ತೆರಳಿ ವಿದ್ಯಾರ್ಥಿಗಳಿಗೆ ಗೌರವ ಸಲ್ಲಿಕೆ

ಕೊಡವೂರು ವಾರ್ಡಿನಲ್ಲಿ ಮನೆ – ಮನೆಗೆ ತೆರಳಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯ ಮೇ 20 ರಂದು ನಡೆಯಿತು. ಕೊಡವೂರು ವಾರ್ಡಿನಲ್ಲಿ ಅನೇಕ ಸಮಿತಿ ರಚನೆ ಮಾಡಲಾಗಿದ್ದು, ಅದರಲ್ಲಿ ವಿದ್ಯಾರ್ಥಿ ಸಮಿತಿಯೂ ಒಂದಾಗಿದೆ. ವಿದ್ಯಾರ್ಥಿ ಸಮಿತಿಯ ಮುಖಾಂತರ ಅನೇಕ ವಿದ್ಯಾರ್ಥಿಗಳಿಗೆ ಪುಸ್ತಕ, ಬ್ಯಾಗ್ ನೀಡಿ ಅವರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಕಾರ್ಯ ನಡೆಯುತ್ತಿದ್ದು, ಎಸೆಸೆಲ್ಸಿ ಪರೀಕ್ಷೆಯಲ್ಲಿ ಕೊಡವೂರು ವಾರ್ಡಿಗೆ ಹೆಸರು ತಂದಿರುವ ವಿದ್ಯಾರ್ಥಿಗಳ ಮನೆಗೆ ತೆರಳಿ ಅವರನ್ನು ಗೌರವಿಸುವ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ನಗರ ಸಭಾ […]

ಮೇ-19 ಮಧ್ಯಾಹ್ನ 12.30ಕ್ಕೆ ಹತ್ತನೇ ತರಗತಿ ಫಲಿತಾಂಶ ಪ್ರಕಟ

ಬೆಂಗಳೂರು: ಮೇ-19 ರಂದು ಮಧ್ಯಾಹ್ನ 12.30ಕ್ಕೆ ಹತ್ತನೆ ತರಗತಿ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ಈ ಬಗ್ಗೆ ಬುಧವಾರ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಅವರು, ‘ನಾಳೆ ಮಧ್ಯಾಹ್ನ 12.30ಕ್ಕೆ SSLC ಫಲಿತಾಂಶ ಪ್ರಕಟಿಸಲಾಗುತ್ತದೆ. ಮಧ್ಯಾಹ್ನ 1 ಗಂಟೆ ಬಳಿಕ ಇಲಾಖೆಯ ವೆಬ್‌ಸೈಟ್‌ನಲ್ಲಿ ಮತ್ತು ಶಾಲೆಗಳಲ್ಲಿ ಫಲಿತಾಂಶ ಲಭ್ಯವಿರಲಿದೆ. https://karresults.nic.in ಗೆ ಲಾಗಿನ್ ಆಗಿ ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸಬಹುದು’. ನಾಳೆ ಮಧ್ಯಾಹ್ನ 12.30ಕ್ಕೆ SSLC ಫಲಿತಾಂಶ ಪ್ರಕಟಿಸಲಾಗುತ್ತದೆ. ಮಧ್ಯಾಹ್ನ 1 ಗಂಟೆ […]

ಉಡುಪಿ ಹೆಡ್ ಕಾನ್ ಸ್ಟೇಬಲ್ ಆತ್ಮಹತ್ಯೆ ಪ್ರಕರಣ: ಎರಡು ಆಡಿಯೋ ಕ್ಲಿಪ್ ಬಹಿರಂಗ

ಉಡುಪಿ: ಎಸ್.ಎಸ್.ಎಲ್.ಸಿ ಪ್ರಶ್ನೆ ಪತ್ರಿಕೆ ಕೋಣೆಯ ಭದ್ರತಾ ಕರ್ತವ್ಯದಲ್ಲಿ ನಿರತರಾಗಿದ್ದಾಗಲೇ ತನ್ನ ಸೇವಾ ರೈಫಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಹೆಡ್ ಕಾನ್ ಸ್ಟೇಬಲ್ ರಾಜೇಶ್ ಕುಂದರ್ ಅವರ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ರಾಜೇಶ್ ಕುಂದರ್ ತಮ್ಮ ಸಹೋದ್ಯೋಗಿಗಳ ಕಿರುಕುಳದ ವಿರುದ್ದ ದೂರು ನೀಡಿದ್ದಾರೆನ್ನಲಾಗುವ ಆಡಿಯೋ ಕ್ಲಿಪ್ ಗಳು ಪೋಲೀಸರ ವಶವಾಗಿದೆ. ಮೊದಲನೆ ಆಡಿಯೋದಲ್ಲಿ ಹಿಜಾಬ್ ಗಲಾಟೆ ಸಂದರ್ಭ ಗಂಗೊಳ್ಳಿ ಠಾಣೆಗೆ ಕ್ಷಿಪ್ರ ದಾಳಿ ಪಡೆ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ರಾಜೇಶ್ ಕೈಕೆಳಗೆ ಇಬ್ಬರು ಸಿಬ್ಬಂದಿ […]

ಹೆಡ್ ಕಾನ್ ಸ್ಟೇಬಲ್ ಆತ್ಮಹತ್ಯೆಗೆ ಎಸಿಪಿ ಮತ್ತು ಪಿಎಸ್ ಐ ಕಾರಣ? ಡೆತ್ ನೋಟಿನಲ್ಲಿ ನಾಲ್ವರ ಹೆಸರು ಬಹಿರಂಗ!

ಉಡುಪಿ: ಆದಿ ಉಡುಪಿ ಶಾಲೆಯಲ್ಲಿ ಹತ್ತನೇ ತರಗತಿ ಪ್ರಶ್ನೆ ಪತ್ರಿಕೆಗಳ ಕೊಠಡಿಯ ಕಾವಲು ಕಾಯುತ್ತಿದ್ದ ಮೀಸಲು ಪಡೆಯ ಹೆಡ್ ಕಾನ್ ಸ್ಟೇಬಲ್ ರಾಜೇಶ್ ಕುಂದರ್, ಗುರುವಾರ ತಡರಾತ್ರಿಯಂದು ತನ್ನದೇ ಸರ್ವಿಸ್ ರೈಫಲಿನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಮತ್ತೊಂದು ತಿರುವು ದೊರೆತಿದೆ. ಮೃತ ರಾಜೇಶ್ ಕುಂದರ್ ಬರೆದಿದ್ದಾರೆ ಎಂದೆನ್ನಲಾಗುವ ಡೆತ್ ನೋಟ್ ಒಂದು ಹೊರಬಂದಿದ್ದು, ಈತನ ಸಹೋದ್ಯೋಗಿ ಗಣೇಶ್ ಎಂಬುವವರಿಗೆ ಈ ಡೆತ್ ನೋಟ್ ಲಭ್ಯವಾಗಿದೆ. ಡೆತ್ ನೋಟ್‌ನಲ್ಲಿ ತನ್ನ ಸಾವಿಗೆ ಡಿಎಆರ್ ಎಸಿಪಿ ಉಮೇಶ್, ಅಶ್ಫಾಕ್ […]