ಸಿದ್ದರಾಮಯ್ಯ ಓರ್ವ ನಿರುದ್ಯೋಗಿ: ಶ್ರೀರಾಮುಲು ವ್ಯಂಗ್ಯ

ಮಂಗಳೂರು: ಮಾಜಿ ಸಿಎಂ ಸಿದ್ಧರಾಮಯ್ಯ ಓರ್ವ ನಿರುದ್ಯೋಗಿ ಎಂದು ಸಚಿವ ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ. ಮಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಮಾಡೋಕೆ ಕೆಲಸ ಇಲ್ಲ. ಕಾಂಗ್ರೆಸ್ ಪಾರ್ಟಿಯ ಎಲ್ಲಾ ನಾಯಕರು ನಿರುದ್ಯೋಗಿಗಳು ಅಂತ ವ್ಯಂಗ್ಯವಾಡಿದ್ದಾರೆ. ನೂತನ ಸಚಿವರು ಅನರ್ಹರಲ್ಲ ಅಂತಾ ಜನ ಹೇಳಿದ್ದಾರೆ. ಜನರು ಅವರನ್ನು ಗೆದ್ದು ಕಳುಹಿಸಿದ್ದಾರೆ. ಕಮಲದ ಚಿಹ್ನೆ ಮೇಲೆ ಗೆದ್ದು ಬಂದಿದ್ದಾರೆ. ಕಾಂಗ್ರೆಸ್ ನವರು ನಿರುದ್ಯೋಗಿಗಳಾಗಿರುವ ‌ಕಾರಣ ಏನೆಲ್ಲ ಹೇಳಿಕೆಗಳ ಮೂಲಕ ಮಾತನಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ. ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡು ಹತಾಶರಾಗಿದ್ದಾರೆ ಎಂದ […]