ಉಸೇನ್ ಬೋಲ್ಟ್ ಓಟ ಮೀರಿಸಿದ ಶ್ರೀನಿವಾಸ ಗೌಡ: ಕಂಬಳದ ಓಟಗಾರನಿಗೆ ಭಾರೀ ಪ್ರಶಂಸೆ
ಮಂಗಳೂರು: ಜಗತ್ತಿನಲ್ಲಿ ಅತ್ಯಂತ ವೇಗದ ಓಟಗಾರರ ಅಂದ್ರೆ ತಟ್ಟನೆ ನೆನಪಿಗೆ ಬರುವುದು ಉಸೇನ್ ಬೋಲ್ಟ್. ವೇಗದ ಓಟದಲ್ಲಿ ಈತನದ್ದು ವಿಶ್ವದಾಖಲೆ. ಆದ್ರೆ ಈತನನ್ನು ಮೀರಿಸಿದ ಓಟಗಾರ ಇದ್ದಾನೆ ಅದು ಕಡಲ ನಗರಿ ನಮ್ಮ ಮಂಗಳೂರಿನಲ್ಲಿ. ಅದು ಬರೀ ಕಾಲಿನಲ್ಲಿ. ಕೆಸರು ಗದ್ದೆಯಲ್ಲಿ. ಜನಪದ ಕ್ರೀಡೆ ಕಂಬಳ ಕೂಟದಲ್ಲಿ. ಹೌದು ಉಸೇನ್ ಬೋಲ್ಟ್ 2009ರಲ್ಲಿ 100 ಮೀಟರ್ ಓಟವನ್ನು ಕೇವಲ 9.58 ಕ್ರಮಿಸಿದ್ದು ವಿಶ್ವದಾಖಲೆ. ಆದರೆ ಈ ದಾಖಲೆ ಮೀರಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಮಿಜಾರು ಶ್ರೀನಿವಾಸ […]