ಗಾಂಜಾ ಮಾರಾಟ ಯತ್ನ ಓರ್ವ ಬಂಧನ
ಮಣಿಪಾಲ: ಮಣಿಪಾಲದ ವಿದ್ಯಾರತ್ನ ನಗರ ಅಪಾರ್ಟ್ಮೆಂಟ್ ಒಂದರ ಸಮೀಪದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತಿದ್ದ ಆರೋಪಿಯನ್ನು ಸೋಮವಾರ ಬಂಧಿಸಲಾಗಿದೆ. ಸಾಸ್ತಾನ, ಗುಂಡ್ಮಿಯ ಹದ್ದಿನಬೆಟ್ಟು ನಿವಾಸಿ ಶ್ರೀನಾಥ್ (28). ಬಂಧಿತ ಆರೋಪಿ. ಬಂಧಿತನಿಂದ 50 ಸಾವಿರ ಮೌಲ್ಯದ ಎರಡು ಕೇಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸೆನ್ ಅಪರಾಧ ಪೊಲೀಸರು ಕಾರ್ಯಚರಣೆ ನಡೆಸಿದ್ದು, ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.