ಪೆರ್ಡೂರಿನಲ್ಲಿ ಅನಂತಪದ್ಮನಾಭ ದೇವಸ್ಥಾನದ ಶ್ರೀಮನ್ಮಹಾರಥೋತ್ಸವ ಸಂಪನ್ನ

ಪೆರ್ಡೂರು: ಮಹತೋಭಾರ ಶ್ರೀ ಅನಂತಪದ್ಮನಾಭ ಪೆರ್ಡೂರು ದೇವಸ್ಥಾನದ ವರ್ಷಾವಧಿ ಶ್ರೀಮನ್ಮಹಾರಥೋತ್ಸವ ಬುಧವಾರ ರಾತ್ರಿ ಸಂಭ್ರಮದಿಂದ ನಡೆಯಿತು. ಕ್ಷೇತ್ರದ ತಂತ್ರಿಗಳಾದ ಕೊರಂಗ್ರಪಾಡಿ ಕೆ.ಜಿ. ರಾಘವೇಂದ್ರ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಪ್ರಧಾನ ಹೋಮ, ಕಲಶಾಭಿಷೇಕ, ರಥಹೋಮ, ಕೊಡಿಪೂಜೆ, ಮಹಾಪೂಜೆ, ರಥಾರೋಹಣ ಹಾಗೂ ರಾತ್ರಿ ಶ್ರೀಮನ್ಮಮಹಾರಥೋತ್ಸವು ವಿಜೃಂಭಣೆಯಿಂದ ನಡೆಯಿತು. ರಾತ್ರಿ ದೀವಟಿಗೆ ಸಲಾಮ್, ಹಚ್ಚಡ ಸೇವೆ, ರಥಾವರೋಹಣ, ಪಲ್ಲಕ್ಕಿ ಸುತ್ತು, ತಪ್ಪೋತ್ಸವ, ನರ್ತನ ಸೇವೆ ಮೊದಲಾದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.