ಜಿಲ್ಲಾ ಧಾರ್ಮಿಕ ಪರಿಷತ್: ಸದಸ್ಯರಾಗಿ ಸುನಿಲ್ ಕೆ.ಆರ್., ಸಾಣೂರು ಶ್ರೀರಾಮ ಭಟ್‌ ಆಯ್ಕೆ

ಉಡುಪಿ: ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾಗಿ ಭಜರಂಗದಳದ ಸಂಚಾಲಕ ಸುನಿಲ್ ಕೆ.ಆರ್. ಹಾಗೂ ಸಾಣೂರು ಮಹಾಲಿಂಗೇಶ್ವರ ದೇಗುಲದ ಅರ್ಚಕ ಸಾಣೂರು ಶ್ರೀರಾಮ ಭಟ್‌ ಅವರು ನೇಮಕಗೊಂಡಿದ್ದಾರೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸುನಿಲ್‌ ಕೆ.ಆರ್.‌ ಹಾಗೂ ಸಾಣೂರು ಶ್ರೀರಾಮ್ ಭಟ್‌ ಸಹಿತ ಏಳು ಮಂದಿಯನ್ನು ಆಯ್ಕೆ ಮಾಡಿದೆ.