ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಸದ್ಭಾವನಾ ದಿನಾಚರಣೆ
ಕಾರ್ಕಳ: ಇಲ್ಲಿನ ಶ್ರೀ ಭುವನೇಂದ್ರ ಕಾಲೇಜಿನ ಎನ್ನೆಸ್ಸೆಸ್ ಘಟಕ ಹಾಗೂ ಮಾನವ ಹಕ್ಕು ಧಾರ್ಮಿಕ ಸೌಹಾರ್ದತಾ ಘಟಕ ಇದರ ವತಿಯಿಂದ ಸದ್ಭಾವನಾ ದಿನಾಚರಣೆ ಹಾಗೂ ಕೋಮು ಸೌಹಾರ್ದ ಪಾಕ್ಷಿಕವನ್ನು ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಟಿ.ಎಂ ಆನಂದ್ ಮಾತನಾಡಿ, ಸೌಹಾರ್ದತೆಯ ಬದುಕು ಜೀವನದಲ್ಲಿ ಬಹಳ ಮುಖ್ಯವಾದುದು, ಜಾತಿ ಧರ್ಮಗಳ ಭೇದವಿಲ್ಲದೆ ಎಲ್ಲರೂ ಒಂದೇ ಎಂಬ ಭಾವನೆಯನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು. ಪರಸ್ಪರ ಸಮಾನತೆ ಹಾಗೂ ಹೊಂದಾಣಿಕೆಯ ಬದುಕು ಸಮಾಜದಲ್ಲಿ ಅಗತ್ಯವಾದುದು ಹಾಗಾಗಿ ಸೌಹಾರ್ದತಾ ಬದುಕು […]