ನಾಳೆ ಅನಾವರಣ , ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸಿಕ್ಸರ್​ ಬಾರಿಸುತ್ತಿರುವ 22 ಅಡಿ ಉದ್ದದ ಸಚಿನ್​ ಪ್ರತಿಮೆ ನಿರ್ಮಾಣ.

ಮುಂಬೈ (ಮಹಾರಾಷ್ಟ್ರ): ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಅವರ ಜೀವನಗಾಥೆಯನ್ನು ಹೇಳುವ ಪ್ರತಿಮೆಯನ್ನು ​ಭಾರತ- ಶ್ರೀಲಂಕಾ ನಡುವಿನ ವಿಶ್ವಕಪ್ ಪಂದ್ಯದ ಮುನ್ನಾದಿನದಂದು ಅನಾವರಣ ಮಾಡಲಾಗುತ್ತಿದೆ. ‘ಭಾರತ ರತ್ನ’ ಸಚಿನ್ ತೆಂಡೂಲ್ಕರ್ ಅವರು ಅನಾವರಣ ಕಾರ್ಯಕ್ರಮಕ್ಕೆ ಸ್ವತಃ ಹಾಜರಿರಲಿದ್ದಾರೆ. ಸಚಿನ್​ ಇಷ್ಟಪಡುವ ಮತ್ತು ತವರು ಮೈದಾನವಾದ ಮುಂಬೈನಲ್ಲಿರುವ ವಾಂಖೆಡೆ ಸ್ಟೇಡಿಯಂನಲ್ಲಿ ‘ತದ್ರೂಪಿ ಲಿಟಲ್​ ಮಾಸ್ಟರ್’​ ಮೈದಾಳಿದ್ದು, ಬುಧವಾರ (ನವೆಂಬರ್​ 1) ಅದು ಅನಾವರಣಗೊಳ್ಳಲಿದೆ.ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಹೆಸರಿಗೆ ಅದೆಷ್ಟೋ ದಾಖಲೆಗಳಿವೆ. ಅವರಾಡಿದ […]