ಆಳ್ವಾಸ್ ಕ್ರೀಡಾಕೂಟಕ್ಕೆ ಸಾಂಸ್ಕೃತಿಕ ಮೆರುಗು: ವಿಜಯ ವೇದಿಕೆಯಲ್ಲಿ ಫತೇ ಬ್ಯಾಂಡ್ ವೈಭವ

ಮೂಡುಬಿದಿರೆ: 80ನೇ ಅಖಿಲಭಾರತ ವಿಶ್ವವಿದ್ಯಾಲಯದ ಕ್ರೀಡಾಕೂಟದ ಎರಡನೇ ದಿನವಾದ ಶುಕ್ರವಾರ ಮೊದಲನೇ ದಿನ ಹಾಗೂ ಎರಡನೇ ದಿನದಂದು ವಿಜೇತರಾದ ಕ್ರೀಡಾರ್ಥಿಗಳಿಗೆ ವಿಜಯ ವೇದಿಕೆಯಲ್ಲಿ ಪದಕ ಪ್ರದಾನಿಸಿ ಗೌರವಿಸಲಾಯಿತು. ವಿಜೇತ ಕ್ರೀಡಾಪಟುಗಳಿಗೆ ಮಾಜಿ ಸಚಿವ ಅಭಯಚಂದ್ರ ಜೈನ್, ಮೂಡುಬಿದಿರೆ ಪಂಡಿತ್ ರೆಸಾರ್ಟ್ ಮಾಲೀಕ ಲಾಲ್ ಗೋಯಲ್ ಹಾಗೂ ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಶನ್‍ನ ಸಂಘಟನಾ ಕಾರ್ಯದರ್ಶಿ ಬಾಬುಶೆಟ್ಟಿ ಸೇರಿದಂತೆ ಗಣ್ಯರು ಪದಕ ವಿತರಿಸಿದರು. ವಿಜೇತರಿಗೆ ಹಾಗೂ ನೂತನ ಕೂಟ ದಾಖಲೆ ಮಾಡಿದ ವಿದ್ಯಾರ್ಥಿಗಳಿಗೆ ನಗದು ನೀಡಿ ಪುರಸ್ಕರಿಸಲಾಯಿತು. ವಿಜಯವೇದಿಕೆಯಲ್ಲಿ ಗಮನ […]