ಎಂಡೋಸಲ್ಫಾನ್ ಬಾಧಿತ ವಿಶೇಷ ಚೇತನ ಬಾಲಕಿಯ ನೃತ್ಯ ವೈರಲ್..
ಮಂಗಳೂರು: ಎಂಡೋಸಲ್ಫಾನ್ ಬಾಧಿತ ವಿಶೇಷಚೇತನ ಬಾಲಕಿಯೊಬ್ಬಳು ಶಾಲೆಯಲ್ಲಿ ಮಾಡಿದ ನೃತ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಸಂಚಲನ ಮೂಡಿಸಿದೆ. ಕೇರಳದ ಕಾಸರಗೋಡು ಜಿಲ್ಲೆ ಕಾಟುಕುಕ್ಕೆಯ ಶ್ರೀ ಸುಬ್ರಹ್ಮಣೇಶ್ವರ ಹೈಯರ್ ಸೆಕೆಂಡರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ತೃಷಾಲಕ್ಷ್ಮೀ ಈಗ ಎಲ್ಲರ ಕಣ್ಮಣಿ. ಈಕೆ ತುಳು ಗೀತೆಗೆ ತನ್ನ ಊನಗೊಂಡ ಪಾದಗಳ ಮೂಲಕ ಇರಿಸಿದ ಹೆಜ್ಜೆ ನೃತ್ಯ ಪ್ರದರ್ಶನ ಪ್ರೇಕ್ಷಕರನ್ನು ನಿಬ್ಬೆರಗಾಗಿಸಿದೆ. ಮನದೊಳಗಿನ ಕಲೆಯ ಬಗೆಗಿನ ಆಸಕ್ತಿ ಹಾಗೂ ತನ್ನ ಪ್ರತಿಭೆಯನ್ನು ಅನಾವರಣಗೊಳಿಸುವ ತುಡಿತದಿಂದ ಶಾಲಾ […]