ಅಣಬೆ ಬಂತು ಅಣಬೆ: ಕಾರ್ಕಳದಲ್ಲಿ ಕೆ.ಜಿ ಗೆ ರೂ.400-500: ಖಾದ್ಯ ಪ್ರಿಯರಿಂದ ಡಿಮ್ಯಾಂಡಪ್ಪೋ ಡಿಮ್ಯಾಂಡು!

ಕಾರ್ಕಳ: ಅಲ್ಪಸ್ವಲ್ಪ ಮಳೆ, ಆಗಾಗ ಮಿಂಚುತ್ತಿರುವ ಸಿಡಿಲು, ಬೇಸಗೆಯಲ್ಲಿ ಉರಿದ ಬಿಸಿಲಿಗೆ ಕಾದು ಕೆಂಡವಾದ ಭೂಮಿ ತಣ್ಣಗಾಗುತ್ತಿದ್ದು, ಈ ನಡುವೆ ಮಳೆಗಾಲದ ಪ್ರಥಮ ಪ್ರಾಕೃತಿಕ ಬಳುವಳಿ ಎಂಬಂತಿದೆ ಈ ಕಲ್ಲಣಬೆ.  ವಾಡಿಕೆ ಪ್ರಕಾರ ಸಿಡಿಲು ಸಹಿತ ಮಳೆಗಾಲ ಆರಂಭವಾಗಿ ತರಗೆಲೆಗಳು ಕೊಳೆಯುವ ಸ್ಥಿತಿ ತಲುಪುತ್ತಿದ್ದಂತೆ ಈ ಕಲ್ಲಣಬೆ ತಲೆಯೆತ್ತಲು ಆರಂಭಿಸುತ್ತದೆ. ಮಳೆಯ ಸೀಸನ್ ಆರಂಭವಾಗುತ್ತಲೇ ತಾಲೂಕಿನ ರೆಂಜಾಳ ಹಾಗೂ ಸುತ್ತಮುತ್ತಲಿನ ಭಾಗದಿಂದ ಈ ಕಲ್ಲಣಬೆ ಕಾರ್ಕಳ ಪೇಟೆಯನ್ನು ಪ್ರವೇಶಿಸಲಾರಂಭಿಸುತ್ತದೆ. ಬಲು ಅಪರೂಪದ ಈ ರುಚಿಕರವಾದ ಕಲ್ಲಣಬೆ ಖರೀದಿಗೆ […]