ಉಡುಪಿ: ಪೇಜಾವರ ಶ್ರೀಪಾದರಿಗಾಗಿ ದೇಶಾದ್ಯಂತ ವಿವಿಧ ಮಠಗಳಲ್ಲಿ ವಿಶೇಷ ಪ್ರಾರ್ಥನೆ
ಉಡುಪಿ: ಪೇಜಾವರ ಶ್ರೀಪಾದರ ಆರೋಗ್ಯದಲ್ಲಿ ಶೀಘ್ರ ಸುಧಾರಣೆ ಕಾಣಲೆಂದು ವಿವಿಧ ಮಠ, ವಿದ್ಯಾಪೀಠ, ದೇಗುಲ ಹಾಗೂ ಸಂಘ ಸಂಸ್ಥೆಗಳಲ್ಲಿ ಶುಕ್ರವಾರ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾ ಪೀಠ ಸೇರಿದಂತೆ ದೇಶಾದ್ಯಂತ ಇರುವ ಶ್ರೀಮಠದ 80ಕ್ಕೂ ಅಧಿಕ ಶಾಖೆಗಳಲ್ಲಿ ಶ್ರೀಗಳು ಗುಣಮುಖರಾಗಲಿ ಎಂದು ಅಭಿಮಾನಿಗಳು, ಶಿಷ್ಯರು, ಹಿತೈಷಿಗಳು ವಿಶೇಷ ಜಪ ಹವನ ಭಜನೆ ಮಾಡಿ ಪ್ರಾರ್ಥನೆ ಸಲ್ಲಿಸಿದರು. ಶ್ರೀಗಳ ಅನಾರೋಗ್ಯದ ವಿಷಯ ತಿಳಿದ ಯೋಗಗುರು ಬಾಬಾ ರಾಮ್‌ದೇವ್ ಶ್ರೀಗಳ ಆರೋಗ್ಯ ಶೀಘ್ರ ಸುಧಾರಿಸಲೆಂದು ಪ್ರಾರ್ಥಿಸಿ ಹರಿದ್ವಾರದ […]